ಮೈಸೂರು

ಕಾರಿನ ಗಾಜು ಒಡೆದು ಲ್ಯಾಪ್ ಟಾಪ್ ಕಳ್ಳತನ

ಮೈಸೂರು,ಅ.20:- ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವಾಹನಗಳ ನಿಲುಗಡೆ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಗಾಜು ಒಡೆದ ದುಷ್ಕರ್ಮಿಗಳು ಅದರಲ್ಲಿದ್ದ ಲ್ಯಾಪ್ ಟಾಪ್ ಮತ್ತು ವ್ಯಾನಿಟಿ ಬ್ಯಾಗ್ ಕಳುವು ಮಾಡಿದ್ದಾರೆ.

ಹಾಸನದ ಸರ್ಕಾರಿ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿನಯ್ ಎಂಬವರು ಅ.17ರಂದು ಬೆಳಿಗ್ಗೆ ಕುಟುಂಬದ ಸದಸ್ಯರೊಂದಿಗೆ ದೇವಾಲಯಕ್ಕೆ ಬಂದಿದ್ದರು. ಕಾರನ್ನು ನಿಲುಗಡೆ ಮಾಡಿ ದೇವರ ದರ್ಶನ ಪಡೆಯಲು ಹೋಗಿದ್ದರು. ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿದ್ದು, ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಸುಮಾರು 30ಸಾವಿರ ರೂ.ಮೌಲ್ಯದ ಲ್ಯಾಪ್ ಟಾಪ್ ಮತ್ತು ವ್ಯಾನಿಟಿ ಬ್ಯಾಗನ್ನು ಕದ್ದೊಯ್ದಿದ್ದಾರೆ. ನಗರದ ಪೊಲೀಸ್ ಠಾಣೆಯ ಪಿಎಸ್ ಐ ಆನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: