
ಮನರಂಜನೆ
ಈ ತಿಂಗಳ 23ರಂದು ಯಾವ ಗುಟ್ಟು ರಟ್ಟು ಮಾಡಲಿದ್ದಾರೆ ಬಾಹುಬಲಿಯ ಪ್ರಭಾಸ್
ದೇಶ(ನವದೆಹಲಿ)ಅ.20:- ಟಾಲಿವುಡ್ ನ ಸೂಪರ್ ಹಿಟ್ ಜೋಡಿಯಾದ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಹಸೆಮಣೆ ಏರಿದರೆ ಎಷ್ಟು ಚೆನ್ನಾಗಿರತ್ತೆ ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದರು. ಎಷ್ಟೋ ಸಲ ಈ ಕುರಿತು ಗಾಸಿಪ್ ಹರಿದಾಡಿದ್ದೂ ಇದೆ. ಆದರೆ ಪ್ರಭಾಸ್ ಉದ್ಯಮಿಯೋರ್ವರ ಮಗಳನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ ಈಗ ವಿಷಯ ಅದಲ್ಲ. ನಟ ಪ್ರಭಾಸ್ ಈ ತಿಂಗಳ 23ಕ್ಕೆ ರಹಸ್ಯವೊಂದನ್ನು ಬಹಿರಂಗಪಡಿಸಲಿದ್ದಾರಂತೆ.
ಅಕ್ಟೋಬರ್ 23ರಂದು ಪ್ರಭಾಸ್ ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದು, ಆ ದಿನ ಯಾವ ರಹಸ್ಯವನ್ನು ಬಹಿರಂಗಪಡಿಸಲಿದ್ದಾರೆಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅನುಷ್ಕಾ ಜೊತೆ ವಿವಾಹದ ಕುರಿತು ಕೇಳಿದರೆ ಪ್ರಭಾಸ್ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಜಾರಿಕೊಳ್ಳುತ್ತಾರಂತೆ ಪ್ರಭಾಸ್. ಇತ್ತೀಚೆಗೆ ಅವರಿಬ್ಬರೂ ಇಟಲಿಯಲ್ಲಿ ಭೇಟಿಯಾಗಿದ್ದು, ಮತ್ತೆ ಇವರ ಕುರಿತ ಕುತೂಹಲ ಗರಿಗೆದರಿದ್ದು, ಪ್ರಭಾಸ್ ಯಾವ ಗುಟ್ಟನ್ನು ರಟ್ಟು ಮಾಡಲಿದ್ದಾರೆಂಬುದು ಮೂರೇ ದಿನದಲ್ಲಿ ತಿಳಿಯಲಿದೆ. (ಎಸ್.ಎಚ್)