ಸುದ್ದಿ ಸಂಕ್ಷಿಪ್ತ

ಅ.22ರಂದು ಅಂಧ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಮೈಸೂರು,ಅ.20 : ಮೈವಿವಿಯ ‘ಸೆಂಟರ್ ಫಾರ್ ಎಜುಕೇಷನ್ ಆಫ್ ವಿಷುಯಲಿ ಚಾಲೆಂಜೆಂಡ್’  ವತಿಯಿಂದ ಅಂಧ ವಿದ್ಯಾರ್ಥಿಗಳಿಗಾಗಿ ‘ಆಡಿಯೋ ಬುಕ್ ಹಾಗೂ ಲೈಬ್ರರಿ’ ಬಿಡುಗಡೆ ಸಮಾರಂಭವನ್ನು ಅ.22ರ ಬೆಳಗ್ಗೆ 10ಕ್ಕೆ ವಿಜ್ಞಾನ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ವಿವಿಯ ವಿಶ‍್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗಡೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಶಿವಾಜಿ ಗಣೇಶನ್, ತಮಿಳುನಾಡಿನ ಬುಕ್ ಶೇರ್ ಇಂಡಿಯಾದ ಜಿ.ಕುಮಾರೇಶನ್ ಇರಲಿದ್ದಾರೆ.

ಉಪಿಇ ಏಫ್ಎ-2 ಮತ್ತು ದೃಷ್ಟಿಯ ಸಂಚಾಲಕಿ ಪ್ರೊ.ಎನ್.ಉಷಾರಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: