ಸುದ್ದಿ ಸಂಕ್ಷಿಪ್ತ

ಅ.22ರಂದು ಗಾಂದೀಜಿ ಕುರಿತ ‘ಸಿಮೆಂಟ್ ಶಿಲ್ಪ ಶಿಬಿರ’

ಮೈಸೂರು,ಅ.20 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ರಂಗಾಯಣ, ಗಾಂಧಿ ಅಧ್ಯಯನ ಕೇಂದ್ರವು ಸಂಯುಕ್ತವಾಗಿ  ಬಾಪು ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ‘ಗಾಂಧೀಜಿ ಕುರಿತ ಸಿಮೆಂಟ್ ಶಿಲ್ಪ ಶಿಬಿರ’ ವನ್ನು ಅ.22ರ ಬೆಳಗ್ಗೆ 11.30ಕ್ಕೆ ಮೈವಿವಿಯ ಮಾನಸಗಂಗೋತ್ರಿಯ ಗಾಂಧಿ ಭವನ ಆವರಣದಲ್ಲಿ ಏರ್ಪಡಿಸಲಾಗಿದೆ.

ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಕುಲಸಚಿವ ಹೆಚ್.ವಿ.ಇಂದ್ರಮ್ಮ ಮೊದಲಾದವರು ಉಪಸ್ಥಿತರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: