ಕರ್ನಾಟಕ

ಸಾಗಾಣಿಕೆಗೆ ಒಳಗಾದ ಮಹಿಳೆಯರಿಗೆ ಉಜ್ವಲ ಪುನರ್‍ವಸತಿ ಕೇಂದ್ರ

ಮಂಡ್ಯ (ಅ.22): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಜ್ಞಾನ ವಿಕಾಸ ಎಜುಕೇಶನ್ ಟ್ರಸ್ಟ್ ಅವರು ಸಾಗಾಣಿಕೆಗೆ ಒಳಗಾದ ಮಹಿಳೆಯರು ಹಾಗೂ ಮಕ್ಕಳಿಗೆ ಉಜ್ವಲ ಪುನರ್‍ವಸತಿ ಕೇಂದ್ರವನ್ನು ಮಂಡ್ಯ ನಗರದ ಕಲ್ಲಹಳ್ಳಿ ಬಳಿ ಪ್ರಾರಂಭಿಸಲಾಗಿದೆ.

ಸಾಗಾಣಿಕೆಗೆ ಒಳಗಾದ ಮಹಿಳೆ ಮತ್ತು ಮಕ್ಕಳಿಗಾಗಿ ಊಟ ವಸತಿ ಮತ್ತು ಆಪ್ತ ಸಮಾಲೋಚನೆಯ ಜೊತೆಗೆ ಅವರ ಉಜ್ವಲ ಭವಿಷ್ಯಕ್ಕಾಗಿ ಹಲವಾರು ತರಬೇತಿಗಳನ್ನು ಸಹ ಕೇಂದ್ರದಲ್ಲಿ ಉಚಿತವಾಗಿ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಸೌಲಭ್ಯ ಪಡೆದುಕೊಳ್ಳಲು, ಕಾರ್ಯದರ್ಶಿಗಳು ಉಜ್ವಲ ಸಂಸ್ಥೆ, ದೂರವಾಣಿ ಸಂಖ್ಯೆ: 08232-225550/ 9480314133 ಅನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: