ಮೈಸೂರು

ಮಗ್ಗೆ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ: ಓರ್ವ ಸಾವು; ಇಬ್ಬರಿಗೆ ಗಾಯ

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಮಗ್ಗೆ ಗ್ರಾಮದಲ್ಲಿ ಎರಡು ಮರಿಗಳೊಂದಿಗೆ ಹುಲಿ ಪ್ರತ್ಯಕ್ಷವಾಗಿದೆ. ಹುಲಿಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಕಲ ರೀತಿಯಿಂದಲೂ ಪ್ರಯತ್ನ ನಡೆಸಿದೆ. ಹುಲಿಯನ್ನು ಕಾಡಿಗಟ್ಟಲು ಗಾಳಿಯಲ್ಲಿ  ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವರು ಚರೆಕಾಳು ಗುಂಡು ಹಾರಿಸಿದ ಪರಿಣಾಮ ಚರೆಕಾಳು ಗುಂಡು ತಾಗಿ ಸ್ಥಳದಲ್ಲಿಯೇ ಓರ್ವ ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ.

ಮೃತನನ್ನು  ಬೆಳತ್ತೂರು ಗ್ರಾಮದ ನಿವಾಸಿ ಮೂರ್ತಿ(೩೫)  ಎಂದು ಗುರುತಿಸಲಾಗಿದೆ. ಕೆಂಪಯ್ಯ ಮತ್ತು ಆರ್.ಎಫ್.ಓ ಸತೀಶ್ ಗಾಯಗೊಂಡಿದ್ದಾರೆ. ಸತೀಶ್ ಅಂತರಸಂತೆ ವಲಯದ ಆರ್.ಎಫ್.ಓ. ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕ್ಕೆ ಹೆಚ್.ಡಿ.ಕೋಟೆ ಪೋಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

 

Leave a Reply

comments

Related Articles

error: