
ಕರ್ನಾಟಕಪ್ರಮುಖ ಸುದ್ದಿ
ಗಣಿ ನಾಡು ಬಳ್ಳಾರಿಯಲ್ಲಿ ಇಂದು ಸಿದ್ದರಾಮಯ್ಯ vs ಬಿ.ಶ್ರೀರಾಮುಲು?
ಬೆಂಗಳೂರು (ಅ.22): ಮುಂದಿನ ತಿಂಗಳು ಅಂದರೆ ನವಂಬರ್ 3 ರಂದು ನಡೆಯಲಿರುವ ಲೋಕಸಭಾ ಉಪಚುನಾವಣೆಗೆ ಇಂದು ಗಣಿ ನಾಡು ಬಳ್ಳಾರಿಯಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಮತ್ತು ಬಿ.ಶ್ರೀರಾಮುಲು ಅವರ ನಡುವೆ ಪ್ರಚಾರದ ಫೈಟ್ ನಡೆಯಲಿದೆ.
ಬಿಜೆಪಿ ಅಭ್ಯರ್ಥಿ ಜೆ ಶಾಂತಾ ಪರ ಶಾಸಕ ಬಿ ಶ್ರೀರಾಮುಲು ಇಂದು ಮತ ಯಾಚನೆ ನಡೆಸಲಿದ್ದಾರೆ. ಇನ್ನೊಂದೆಡೆ ಮತ್ತೆ ಬಳ್ಳಾರಿಗೆ ಕಾಲಿಟ್ಟಿರುವ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಮತ ಯಾಚನೆ ಮಾಡಲಿದ್ದಾರೆ.
ಸಿದ್ದರಾಮಯ್ಯ ಅವರು ಬಳ್ಳಾರಿ ಗಣಿ ಧಣಿಗಳ ವಿರುದ್ಧ ಸಿಡಿದೆದ್ದು ಪಾದ ಯಾತ್ರೆ ನಡೆಸಿದ್ದರು. ಕೊನೆಗೆ ಈ ಪಾದಯಾತ್ರೆಯು ಮುಖ್ಯಮಂತ್ರಿ ಗದ್ದುಗೆ ಏರಲೂ ಕಾರಣವಾಗಿತ್ತು. ಇದೀಗ ಮತ್ತೆ ಬಳ್ಳಾರಿಯಲ್ಲಿ ರೋಡ್ ಶೋ ನಡೆಸಿ ಕಾಂಗ್ರೆಸ್ ಬಲವರ್ಧನೆಗೆ ಸಿದ್ದರಾಮಯ್ಯ ಅವರು ಮುಂದಾಗಿದ್ದು, ಬಿಜೆಪಿ ಪಾಳಯವೂ ಅಬ್ಬರ ಪ್ರಚಾರ ಹಮ್ಮಿಕೊಂಡಿದೆ. (ಎನ್.ಬಿ)