ದೇಶಪ್ರಮುಖ ಸುದ್ದಿ

ಕರ್ಣಿಸೇನಾ ಸಂಘಟನೆಗೆ ಕ್ರಿಕೆಟಿಗ ಜಡೇಜಾ ಪತ್ನಿ ಮುಖ್ಯಸ್ಥೆ!

ಗುಜರಾತ್ (ಅ.22): ಪದ್ಮಾವತ್ ಸಿನಿಮಾ ಬಿಡುಗಡೆ ಮಾಡದಂತೆ ಭಾರಿ ವಿರೋಧ ವ್ಯಕ್ತಪಡಿಸಿ ಗದ್ದಲ ನಡೆಸಿದ್ದ ಮತ್ತು ಈ ಮೂಲಕ ದೇಶದಲ್ಲೇ ಸುದ್ದಿಯಾಗಿದ್ದ ಕರ್ಣಿ ಸೇನಾ ಸಂಘಟನೆಯು ಇದೀಗ ಗುಜರಾತ್ ಘಟಕಕ್ಕೆ ಹೊಸ ಮುಖ್ಯಸ್ಥರನ್ನಾಗಿ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾ ಸೋಲಂಕಿ ಅವರನ್ನು ನೇಮಕ ಮಾಡಿದೆ. ಈ ಬೆಳವಣಿಗೆ ಅಸಮಾಧಾನ ವ್ಯಕ್ತವಾಗಿದೆ.

ಗುಜರಾತ್, ರಾಜಸ್ಥಾನ ಸೇರಿದಂತೆ ಹಲವು ಕಡೆಗಳಲ್ಲಿ ಬಲಿಷ್ಠವಾಗಿರುವ ಕರ್ಣಿಸೇನಾ ಸಂಘಟನೆಯು ಇದೀಗ ರಿವಾ ಸೋಲಂಕಿಯನ್ನ ನೇಮಕ ಮಾಡುವ ಮೂಲಕ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸಂಘಟನೆಯ ರಾಷ್ಟ್ರೀಯ ಮುಖ್ಯಸ್ಥ ಮಹಿಪಾಲ್ ಸಿನ್ಹಾ ಮಕರಾನ ಅವರು ಈ ನೇಮಕ ಮಾಡಿದ್ದಾರೆ.

ಆದರೆ ಆಯ್ಕೆ ಕುರಿತು ಸಂತಸ ವ್ಯಕ್ತಪಡಿಸಿರುವ ಜಡೇಜಾ ಪತ್ನಿ ರಿವಾ ಸೋಲಂಕಿ, ಮಹಿಳೆಯರ ಹಕ್ಕಿಗಾಗಿ ಪ್ರಾಮಾಣಿಕಿ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಕರ್ಣಿಸೇನಾ ಮುಖ್ಯಸ್ಥೆ ನೇಮಕ ವಿಚಾರ ಕುರಿತು ಈಗಾಗಲೇ ಪತಿ ರವೀಂದ್ರ ಜಡೇಜಾ ಬಳಿ ಚರ್ಚೆ ನಡೆಸಿದ್ದೇನೆ. ನಮ್ಮ ಸಮುದಾಯದ ಹೆಣ್ಣು ಮಕ್ಕಳಿಗಾಗಿ ಈ ಹುದ್ದೆ ಅಲಂಕರಿಸುತ್ತಿದ್ದೇನೆ ಎಂದು ರಿವಾ ಹೇಳಿದರು.

ಇದೇ ವೇಳೆ ರಾಜಕೀಯ ಪ್ರವೇಶ ಕುರಿತು ಈಗಲೇ ಏನೂ ಹೇಳುವುದಿಲ್ಲ ಎಂದು ರಿವಾ ಹೇಳಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆಯನ್ನೂ ಅವರು ನೀಡಿದ್ದಾರೆ. ಮೆಕಾನಿಕಲ್ ಇಂಜಿನಿಯರ್ ಆಗಿದ್ದ ರಿವಾ ಸೋಲಂಕಿ 2016ರಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾರನ್ನ ವರಿಸಿದರು.

ಬಾಲಿವುಡ್ ಪದ್ಮಾವತಿ ಚಿತ್ರ ನಿರ್ಮಾಣ ಹಾಗೂ ಬಿಡುಗಡೆಗೆ ಕರ್ಣಿ ಸೇನಾ ಸಂಘಟನೆ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಪ್ರತಿಭಟನೆ ನಡೆಸಿತ್ತು. ಚಿತ್ರದ ಸೆಟ್ ಮೇಲೆ ದಾಳಿ ನಡೆಸಿತ್ತು. ಚಿತ್ರ ಬಿಡುಗಡೆಗೆ ಅಡ್ಡಿಪಡಿಸಿದ ಆರೋಪಗಳು ಈ ಸಂಘಟನೆ ಮೇಲಿದೆ. ಇದೀಗ ಇದೇ ಇದೇ ಸಂಘಟನೆಯ ಗುಜರಾತ್ ಘಟಕದ ಮಹಿಳಾ ಮುಖ್ಯಸ್ಥೆಯಾಗಿ ಜಡೇಜಾ ಪತ್ನಿ ಆಯ್ಕೆಯಾಗಿರುುವುದ ಹಲವರ ಅಸಮಧಾನಕ್ಕೆ ಕಾರಣವಾಗಿದೆ. (ಎನ್.ಬಿ)

Leave a Reply

comments

Related Articles

error: