ಮೈಸೂರು

ಅಸಮಾನತೆ ವಿರುದ್ಧ ಹೋರಾಡಿದವರಲ್ಲಿ ಕುವೆಂಪು ಒಬ್ಬರು : ಡಾ.ಕಂಬಾರ ಬಣ್ಣನೆ

%e0%b2%95%e0%b3%81%e0%b2%b5%e0%b3%86%e0%b2%aa%e0%b3%81-1ರಾಷ್ಟ್ರ ಕವಿ ಕುವೆಂಪು  ಮಹಾನ್ ದಾರ್ಶನಿಕರು ಗಾಂಧೀಜಿ ನಂತರ ಸಮಾಜದಲ್ಲಿ ಇದ್ದ ಜಾತಿ, ಅಸಮಾನತೆ ವಿರುದ್ಧ ಹೋರಾಡಿದವರಲ್ಲಿ ಕುವೆಂಪು ಒಬ್ಬರು ಎಂದು  ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರ ಶೇಖರ ಕಂಬಾರ ಬಣ್ಣಿಸಿದರು.

ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರಲ್ಲಿ  ಗುರುವಾರ ಸಂಜೆ  ಜನಚೇತನ ಟ್ರಸ್ಟ್,  ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಗ್ರಾಮೀಣ ಟ್ರಸ್ಟ್ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ  ರಾಷ್ಟ್ರ ಕವಿ ಕುವೆಂಪು ಅವರ 112 ನೇ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಕಾನ್ಮಲೆಗಳ ಮೇರು ಶಿಖರ ‘ಕಾಲಕ್ಕೆ ಕನ್ನಡಿ-ವಿಶ್ವಕವಿ ಕುವೆಂಪು’ ಅಭಿನಂದನೆ- ಗೀತ ಗಾಯನ- ರೂಪಕ- ನೃತ್ಯ- ನಾಟಕ- ಕಾವ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರವೀಂದ್ರ ನಾಥ್ ಠ್ಯಾಗೂರ್ ನಂತರ ದೇಶ ಕಂಡ ದೊಡ್ಡ ಕವಿ ಕುವೆಂಪು. ಮನುಜ ಪಥ ವಿಶ್ವ ಪಥ ಎಂದು ಇಡೀ ಜಗತ್ತಿಗೆ ಸಾರಿದರು ಎಂದು ಹೇಳಿದರು.

ಅವರನ್ನು  ಜಗದ ಕವಿ ಯುಗದ ಕವಿ ಎಂದು ಬೇಂದ್ರೆ ಅವರೇ ಬಣ್ಣಿಸಿದ್ದಾರೆ. ಅವರಿನ್ನೂ ಜನ ಮಾನಸದಲ್ಲಿ ಹಸಿರಾಗಿದ್ದಾರೆ ಎಂಬುದಕ್ಕೆ  ಇಲ್ಲಿ  ನೆರೆದಿರುವ ಜನ ಸಾಗರವೇ ಸಾಕ್ಷಿ ಎಂದು ಹೇಳಿದರು. ಬಸವಣ್ಣನವರ ನಂತರ ದೇಶದಲ್ಲಿ  ಅಸ್ಪೃಶ್ಯತೆ ಮತ್ತು ಅಸಮಾನತೆಗಾಗಿ ಹೋರಾಡಿದ, ಮನುಷ್ಯತ್ವದ ಬಗ್ಗೆ ಆಲೋಚನೆ ಮಾಡಿದ  ಇನ್ನೊಬ್ಬ ಕವಿ ಈ ಶತಮಾನದಲ್ಲಿ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಟ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಮತ್ತು ಡಾ.ರಾಜ್ ಕುಮಾರ್ ಅವರು ಕನ್ನಡಿಗರ ಎರಡು ಕಣ್ಣುಗಳು,’’ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಸಾಹಿತಿ ಡಾ.ಸಿಪಿಕೆ, ಅಂಬಳಿಕೆ ಹಿರಿಯಣ್ಣ, ಡಾ.ಟಿ.ಸಿ. ಪೂರ್ಣಿಮಾ, ಪ್ರೊ.ಮಲೆಯೂರು ಗುರುಸ್ವಾಮಿ, ಡಾ. ಲತಾ ರಾಜಶೇಖರ್,  ರಂಗ ಕರ್ಮಿ ಜನಾರ್ಧನ್, ಶಶಿಧರ್ ಭಾರಿಘಾಟ್, ಮಂಡ್ಯ ರಮೇಶ್, ಕೃಪಾ ಪಡ್ಕೆ, ಪ್ರೊ.ನೀಲಗಿರಿ ತಳವಾರ್, ಲೀಲಾ ಅಪ್ಪಾಜಿ, ಬೆಮೆಲ್ ಸುರೇಶ ಬಾಬು ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ  ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಜನ ಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎನ್.ಗೌಡ, ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷ ಪ್ರೊ.ಜೆ.ಶಶಿಧರ ಪ್ರಸಾದ್, ಗ್ರಾಮೀಣ ಸಂಸ್ಥೆ ಅಧ್ಯಕ್ಷ ರಾಜು ಬಿ.ಕನ್ನಲಿ, ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಎಸ್.ಸಿ.ಮಧು ಚಂದನ್ ಮತ್ತಿತರರು ಉಪಸ್ಥಿತರಿದ್ದರು.
ಗೀತಗಾಯನ: ಬಳಿಕ  ಗಾಯಕಿ ಡಾ.ಶಮಿತಾ ಮಲ್ನಾಡ್ ನೇತೃತ್ವದಲ್ಲಿ ಕುವೆಂಪು ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಗಾಯಕರಾದ ಬಿ.ಕೆ.ಸುಮಿತ್ರಾ, ಹೊಂಬೇಗೌಡ, ರೇಷ್ಮಾ ಬಾನು, ಪುತ್ತೂರು ನರಸಿಂಹನಾಯಕ್, ಜೋಗಿ ಸುನೀತಾ, ಅಜಯ್ ವಾರಿಯರ್ ತಮ್ಮ ಸುಶ್ರಾವ್ಯ ಕಂಠದಿಂದ ಗೀತೆಗಳನ್ನು ಹಾಡಿದರು. ಡ್ರಾಮಾ ಜ್ಯೂನಿಯರ್ಸ್‌  ಬಾಲ ನಟರಿಂದ  ಕುವೆಂಪು ರಚಿತ  ಜಲಗಾರ, ಶೂದ್ರ ತಪಸ್ವಿ ನಾಟಕಗಳು ಪ್ರದರ್ಶನಗೊಂಡವು, ಭರತ ನಾಟ್ಯ ಕಲಾವಿದೆ ಕೃಪಾ ಫಡ್ಕೆ ಅವರಿಂದ ಕುವೆಂಪು ಗೀತೆಗಳ ನೃತ್ಯ ರೂಪಕ ಮತ್ತು ರಾಷ್ಟ್ರಕವಿ ಕುವೆಂಪು ಅವರೊಂದಿಗೆ ದೇಜಗೌ ಅವರು ನಡೆಸಿದ ಸಂದರ್ಶನದ ಆಯ್ದ ಭಾಗಗಳ ಚಿತ್ರಾಧಾರಿತ ಪ್ರಸ್ತುತಿ ನಡೆಯಿತು.

Leave a Reply

comments

Related Articles

error: