ಮೈಸೂರು

ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳುತ್ತ ಬಿದ್ದಿದ್ದ ನರಿಗೆ ನೀರುಣಿಸುವ ಮೂಲಕ ಮಾನವೀಯತೆ ಮೆರೆದ ಸ್ಥಳೀಯರು

ಮೈಸೂರು,ಅ.22:- ರಸ್ತೆ ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿಯಲ್ಲೇ ನರಳುತ್ತ ಬಿದ್ದಿದ್ದ ನರಿಯೊಂದಕ್ಕೆ ಸಾರ್ವಜನಿಕರೇ ನೀರು ಕುಡಿಸಿ ರಕ್ಷಿಸಲು ಮುಂದಾಗುವ ಮೂಲಕ ಮಾನವೀಯತೆ ಮೆರೆದ ಘಟನೆ ಮೈಸೂರಿನ ಪಡುವಾರಳ್ಳಿಯ ಸಿಎಫ್ ಟಿಆರ್ ಐ ಸಮೀಪದ ಪೆಟ್ರೋಲ್ ಬಂಕ್ ಎದುರು ನಡೆದಿದೆ.

ಮೈಸೂರಿನ ಪಡುವಾರಳ್ಳಿಯ ಸಿಎಫ್ ಟಿಆರ್ ಐ ಸಮೀಪದ ಪೆಟ್ರೋಲ್ ಬಂಕ್ ಎದುರು  ನರಿಯೊಂದು ಸೊಂಟಕ್ಕೆ ಪೆಟ್ಟು ಬಿದ್ದು ನರಳುತ್ತಿತ್ತು. ಇದನ್ನು ದಾರಿ ಹೋಕರು ಗಮನಿಸಿದ್ದು, ಅಷ್ಟರಲ್ಲಾಗಲೇ ಸ್ಥಳಕ್ಕಾಗಮಿಸಿದ್ದ ವಕೀಲ ಪಡುವಾರಹಳ್ಳಿ ರಾಮಕೃಷ್ಣ, ನರಿಗೆ ಬಾಟಲಿಯಿಂದ ನೀರು ಕುಡಿಸಲು ಮುಂದಾದರು. ಬಳಿಕ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು.

ಅಂದಾಜು ಸುಮಾರು 8-9 ತಿಂಗಳ ಈ ನರಿಯು ರಸ್ತೆ ಅಪಘಾತದಿಂದ ಸೊಂಟದ ಮೂಳೆ ಮುರಿದಿರುವಂತಿದೆ. ವೈದ್ಯಕೀಯ ಚಿಕಿತ್ಸೆ ಲಭಿಸಿದರೆ ಬದುಕುಳಿಯಲಿದೆ. ಈ ಸಲುವಾಗಿಯೇ ಸಂಬಂಧಪಟ್ಟವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದೇನೆ. ಆದರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿಲ್ಲ ಎಂದು ವಕೀಲ ರಾಮಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: