ಕರ್ನಾಟಕಮೈಸೂರು

ಸ್ವಾಭಿಮಾನದ ಕುರಿತು ಯಾರಿಂದಲೂ ಪಾಠ ಕಲಿಯಬೇಕಿಲ್ಲ : ಸಿಎಂ ಸಿದ್ದರಾಮಯ್ಯ

ಸ್ವಾಭಿಮಾನದಲ್ಲಿ ನಾವು ಯಾರಿಗೂ ಕಡಿಮೆಯಿಲ್ಲ. ಸ್ವಾಭಿಮಾನ ಕುರಿತು ನಾವು ಯಾರಿಂದಲೂ ಪಾಠ ಕಲಿಯಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಆವರಣದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 69 ಲಕ್ಷ ರೂ. ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳಿಗೆ ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವುದು ಸ್ವಾಭಿಮಾನದ ಕೆಲಸವಲ್ಲ. ಅದು ಋಣ ತೀರಿಸುವ ಕೆಲಸ. ರಾಜಕೀಯದಲ್ಲಿ ನಾನು ಎಂಬ ಪದವನ್ನು ಬಳಸಬಾರದು. ಜನರಿಲ್ಲದೇ ನಾವು ಏನೇನೂ ಇಲ್ಲ ನಾನು ಎಂದು ಹೇಳಿಕೊಳ್ಳುವವರಿಗೆ ಉಪಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಮಾತನಾಡುವವರು ಖಾಲಿ ಪಾತ್ರೆಗಳಿದ್ದಂತೆ. ಅವರೆಂದೂ ಕೆಲಸ ಮಾಡುವುದಿಲ್ಲ. ನಾವು ಹಾಗಲ್ಲ. ನಮ್ಮಲ್ಲಿರುವ ಸಚಿವರು ಮಾತು ಕಡಿಮೆ ಕೆಲಸ ಜಾಸ್ತಿ ಮಾಡುತ್ತಾರೆ. ಅದಕ್ಕೆ ಇಂದಿನ ಅಭಿವೃದ್ಧಿ ಕಾಮಗಾರಿಗಳೇ ಸಾಕ್ಷಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರುಗಳಾದ ತನ್ವೀರ್ ಸೇಠ್, ಡಾ. ಹೆಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವ ಪ್ರಸಾದ್, ಸಂಸದ ಧ್ರುವ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: