ಸುದ್ದಿ ಸಂಕ್ಷಿಪ್ತ
ಅ.27ರಂದು ಸೈಕಲ್ ರ್ಯಾಲಿ
ಮೈಸೂರು,ಅ.22 : ಜಯಲಕ್ಷ್ಮೀಪುರಂನ ಸೆಂಟ್ ಜೋಸೆಫ್ ಪದವಿಪೂರ್ವ ಕಾಲೇಜಿನ ವತಿಯಿಂದ ಪರಿಸರ ಸಂರಕ್ಷಣೆಗಾಗಿ ‘ ಹಸಿರು ಉಳಿಸಿ ಸ್ವಚ್ಚ ಉಸಿರಿಗಾಗಿ’ ಘೋಷಣಾ ವಾಕ್ಯದೊಂದಿಗೆ ಸೈಕಲ್ ರ್ಯಾಲಿಯನ್ನು ಅ.27ರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.
ರ್ಯಾಲಿಯೂ ಕಾಲೇಜಿನಿಂದ ಆರಂಭಿಸಿ ವಿವಿ ಪುರಂನ ಪೊಲೀಸ್ ಠಾಣೆ, ಕೆಆರ್.ಎಸ್ ರಸ್ತೆ, ಚಲುವಾಂಬ ಪಾರ್ಕ್, ನಂತರ ಕಿಂಗ್ಸ್ ಕೋರ್ಟ್, ಕಲಾ ಮಂದಿರ, ಕೆ.ಎಸ್.ಓ.ಯು ಮೂಲಕ ಕಾಲೇಜು ಸೇರಲಿದೆ. (ಕೆ.ಎಂ.ಆರ್)