ಮನರಂಜನೆಮೈಸೂರು

ಅಕ್ಟೋಬರ್ 26 ರಿಂದ 28 ರವರೆಗೆ ನಟನರಂಗಶಾಲೆಯಲ್ಲಿ ‘ರಂಗತೇರು’

ಮೈಸೂರು,ಅ.23:- ಮಂಡ್ಯ ರಮೇಶ ನೇತೃತ್ವದ ರಾಮಕೃಷ್ಣನಗರದಲ್ಲಿರುವ  ನಟನರಂಗಶಾಲೆಯಲ್ಲಿ ಅಕ್ಟೋಬರ್ 26 ರಿಂದ 28 ರವರೆಗೆ ಶಿವಮೊಗ್ಗ ರಂಗಾಯಣದ 3 ವಿಭಿನ್ನನಾಟಕಗಳ ಪ್ರದರ್ಶನವಿದೆ.

ನಟನ ರಂಗಶಾಲೆಯು ತನ್ನ ಚಟುವಟಿಕೆಯ ಭಾಗವಾಗಿ ಸದಭಿರುಚಿಯ ಸಹೃದಯ ಪ್ರೇಕ್ಷಕರನ್ನು ಹುಟ್ಟುಹಾಕಲು ವಾರಾಂತ್ಯರಂಗ ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಶಿವಮೊಗ್ಗ ರಂಗಾಯಣವುಇದೇ ಮೊದಲ ಬಾರಿಗೆರಂಗಾಯಣದ‘ರಂಗತೇರು’ ಹೆಸರಿನಲ್ಲಿ ಕರ್ನಾಟಕದ ಕೆಲವು ಊರುಗಳಿಗೆ ತನ್ನ ಮೂರು ವಿಭಿನ್ನ ಶೈಲಿಯ ನಾಟಕಗಳನ್ನು ಸಿದ್ಧಪಡಿಸಿಕೊಂಡು ರಂಗಸಂಚಾರ ಹೊರಟಿದೆ.

ಅಕ್ಟೋಬರ್ 26 ರಂದು ವಾಸ್ತವವಾದಿ ಶೈಲಿಯ ಮೋಹನ್‍ರಾಕೇಶ್‍ಅವರ ನಾಟಕಾಧಾರಿತ ಸಿದ್ಧಲಿಂಗ ಪಟ್ಟಣಶೆಟ್ಟಿಅವರ‘ಆಷಾಢದಒಂದು ದಿನ’ ನಾಟಕವು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಡಾ.ಎಂ.ಗಣೇಶ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಭಾವನಾತ್ಮಕ ಸಂಬಂಧ ಹಾಗೂ ಬದುಕಿನ ಸತ್ಯಾಸತ್ಯತೆಗಳ ನಡುವಣ ತಾಕಲಾಟಗಳು ಮತ್ತು ಆ ಮೂಲಕ ಪದರ ಪದರವಾಗಿಗೋಚರಿಸುವ ವಾಸ್ತವ ಸತ್ಯ ಆಷಾಢದ ಒಂದು ದಿನದ ಕೇಂದ್ರ ವಸ್ತು. ವಿಲಕ್ಷಣ ಪ್ರತಿಭಾಶಾಲಿ ಕಾಳಿದಾಸನನ್ನು ಪ್ರೇಮಿಸಿ, ಅವನ ಬದುಕನ್ನು ಪೋಷಿಸಿ ತಾನು ಮಾತ್ರ ಸವೆದು ಹೋದ ಮುಗ್ಧ ಕೋಮಲ ಹೆಣ್ಣೊಬ್ಬಳ ಚಿತ್ರಣ ಇಲ್ಲಿ ಆಪ್ತವಾಗಿ ಮೂಡಿ ಬಂದಿದೆ. ಜೀವನ ಹಾಗೂ ಕಾವ್ಯದ ಬೆಸುಗೆಯಲ್ಲಿರುವ ಸಂಕೀರ್ಣತೆಯನ್ನುಕಟ್ಟಿಕೊಡುವ ಈ ನಾಟಕ ಮೂಲಭೂತವಾಗಿ ಸೃಷ್ಟಿಕ್ರಿಯೆಯ ಸಮಸ್ಯೆಯನ್ನುಅತಿ ಸೂಕ್ಷ್ಮವಾದ ಪರೀಕ್ಷೆಗೆ ಒಳಪಡಿಸುತ್ತದೆ. ಮೈಸೂರು ರಂಗಾಯಣದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಶ್ರೀನಿವಾಸ್ ಭಟ್ (ಚೀನೀ) ಅವರುಈ ನಾಟಕಕ್ಕೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ಅಕ್ಟೋಬರ್ 27 ರಂದು ವೃತ್ತಿರಂಗಭೂಮಿಯ ಹಾಸ್ಯ ನಾಟಕ,ಕಂಪನಿ ಶೈಲಿಯಅಭಿನಯ, ಸಂಗೀತ, ಮತ್ತು ಹಾಡುಗಳ ಮೂಲಕರಂಜಿಸಲು ‘ದುಬೈ ದೂಳಪ್ಪನ ಭರ್ಜರಿ ಗಾಳ’ ನಾಟಕವುಉತ್ತರಕರ್ನಾಟಕದ ಬಾಗಲಕೋಟೆಯ ವೃತ್ತಿ ರಂಗ ಹೆಸರಾಂತ ಹಾಸ್ಯ ಕಲಾವಿದ ಮತ್ತು ನಾಟಕ ರಚನಾಕಾರರಾದ ಜೇವರ್ಗಿ ರಾಜಣ್ಣ ಅವರ ನಿರ್ದೇಶನದಲ್ಲಿ ಪ್ರದರ್ಶನಕಾಣಲಿದೆ. ಆಧುನಿಕರಂಗಭೂಮಿ ಮತ್ತು ವೃತ್ತಿರಂಗಭೂಮಿ ನಡುವಿನ ಕಂದಕವನ್ನುಅಷ್ಟಿಷ್ಟಾದರೂ ಕಡಿಮೆ ಮಾಡಿ ಎರಡೂ ರಂಗಭೂಮಿಗಳ ನಡುವೆ ಸಣ್ಣ ಸೇತುವೆಕಟ್ಟಲು ಸಾಧ್ಯವೇ?ಎಂಬ ಕಿರುಪ್ರಯತ್ನವನ್ನು ಈ ನಾಟಕದ ಮೂಲಕ ಮಾಡಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಶೇಖ್ ಮಾಸ್ತರರವರು ಈ ನಾಟಕಕ್ಕೆಅದ್ಭುತ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.

ಅಕ್ಟೋಬರ್ 28ರಂದು ಡಿವೈಸ್ಡ್ ಪ್ಲೇಆಗಿರುವ ‘ಟ್ರಾನ್ಸ್‍ನೇಷನ್’ ಎಂಬ ನಾಟಕವು ಎನ್.ಎಸ್.ಡಿ. ಪದವೀಧರೆಯಾದ ಸವಿತಾರಾಣಿ, ಪಾಂಡಿಚೇರಿ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಸರಳ ಕಥಾನಕ ಹೊಂದಿರುವ ರಚನೆಯಲ್ಲಿ ದಿನನಿತ್ಯ ಆಗುಹೋಗುವ ಘಟನಾವಳಿಗಳನ್ನು, ಸನ್ನಿವೇಶಗಳನ್ನು ಒಳಗೊಂಡ ಅನುಕರಣೆಯಅನಾವರಣ.ಪಿತೃ ಪ್ರಧಾನ ಸಮಾಜ ಮತ್ತು ರಾಜಕೀಯ ಸನ್ನಿವೇಶಗಳ ನಡುವೆ ನಡೆದ ಘಟನಾವಳಿಗಳ ಅನುಭವವೇ ಹಂದರ. ಇದು ಸೂಪ್ತಾವಸ್ಥೆಯ ಅನಾವರಣ, ಜಾಗೃತಾವಸ್ಥೆಯ ಅನಾವರಣವಲ್ಲ. ಜಾಗೃತಾವಸ್ಥೆ ಅತ್ಯಂತ ಬಲಹೀನ. ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಹಿಂಸೆ, ಅಸಹನೆ ಇವು ಅಗೋಚರ. ಇದಕ್ಕೆರಂಗಭೂಮಿಯು ಹೊರತಲ್ಲ. ಇವುಗಳೊಂದಿಗಿನ ಜಗ್ಗಾಟವೇ ಈ ಪ್ರಯತ್ನ.

ಈ ಮೂರೂದಿನಗಳ ಕಾಲ ಸಂಜೆ 6.30ಕ್ಕೆರಾಮಕೃಷ್ಣ ನಗರದಲ್ಲಿರುವ ನಟನರಂಗಶಾಲೆಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: