ಮೈಸೂರು

ಗಾಯತ್ರಿ ಟ್ರಸ್ಟ್’ನ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ಭಾರತೀಯರಿಗೆ ಕಾಲಮಾನದ ಬಗ್ಗೆ ಹತ್ತು ಸಾವಿರ ವರ್ಷಗಳ ಹಿಂದೆ ತಿಳಿದಿತ್ತು ಎಂದು ನಿವೃತ್ತ ಬ್ಯಾಂಕ್ ಮ್ಯಾನೇಜರ್ ರಘುಪತಿ ತಾಮ್ಹಣಕರ್ ಹೇಳಿದರು. ಅವರು ಸಿದ್ದಾರ್ಥ ನಗರದ ಗಾಯತ್ರಿ ಎಜುಕೇಷನಲ್ ಕಲ್ಚರಲ್ ಹಾಗೂ ಚಾರಿಟಬಲ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಯ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ದಿನದರ್ಶಿಕೆ ಎಂದರೆ ಕೇವಲ ದಿನಾಂಕವಲ್ಲ. ಅದು ಮುಂದಿನ ದಿನಗಳ ಭವಿಷ್ಯದ ಬಗ್ಗೆ ಧೋರಣೆ ಮತ್ತು ನಿರ್ಧಾರಗಳನ್ನು ತಿಳಿಸಿ ಶಿಸ್ತಿನ ಜೀವನವನ್ನು ತಿಳಿಸುತ್ತದೆ ಎಂದು ಹೇಳಿದರು.

ಇಂದಿನ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ವನಜಾ ಬಿ.ಪಂಡಿತ್ ಹೇಳಿದರು.

ಅಥಿತಿಗಳ ಪರಿಚಯವನ್ನು ಬಾಲಚಂದ್ರ ಡೋಂಗ್ರೆ ಮಾಡಿದರು. ಗೋವಿಂದ ಕುಲಕರ್ಣಿ ಪ್ರಾಸ್ತಾವಿಕ ನುಡಿ ಹೇಳಿದರು. ವೀಣಾ ಡೋಂಗ್ರೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವೆಂಕಟರಾಮ, ಸದ್ವಿದ್ಯಾ ಉಪ ಪ್ರಾಂಶುಪಾಲರಾದ ಹೆಚ್.ಎನ್. ಸುಬ್ಬರಾವ್, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಹರ್ಷ ಮತ್ತಿತರರು ಭಾಗವಹಿಸಿದ್ದರು.

Leave a Reply

comments

Related Articles

error: