ಪ್ರಮುಖ ಸುದ್ದಿಮೈಸೂರು

ಆಂಗ್ಲೋ ಇಂಡಿಯನ್ ಕೋಟಾದಡಿ ನೇಮಕಕ್ಕೆ ಮನವಿ

ಮೈಸೂರು,ಅ.23 : ಆಂಗ್ಲೋ ಇಂಡಿಯನ್ ಕೋಟಾದಡಿಯಲ್ಲಿ ರಾಜ್ಯ ವಿಧಾನಸಭೆಗೆ ತಮ್ಮನ್ನು ನಾಮಕರಣ ಮಾಡಬೇಕೆಂದು ದಿ ಆಲ್ ಇಂಡಿಯಆಂಗ್ಲೋ-ಇಂಡಿಯನ್ ಅಸೋಸಿಯೇಷನ್ ಮಾಜಿ ಉಪಾಧ್ಯಕ್ಷ ಬಿ.ಎ. ಎಲ್ವೀಸ್ ಫ್ಲಿಚರ್  ಸುದ್ದಿಗೋಷ್ಠಿಯ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.

ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಮೀಸಲಿರುವ ಸ್ಥಾನವನ್ನು 1981ರ ನಂತರ ಮೈಸೂರು ಪ್ರಾಂತ್ಯದಲ್ಲಿ ಯಾರಿಗೂ ನೀಡಿಲ್ಲ,  ಆದಾಗ್ಯೂ ಶೀಲಚಿರಾನಿಯವರಿಗೆ ಹೊರತು ಪಡಿಸಿ ಸಮಾಜಕ್ಕೆಂದು ಮೀಸಲಿರಿಸಿರುವ ಸ್ಥಾನವನ್ನು ನೀಡಿಲ್ಲ, ಇದರಿಂದ ಸಾಮಾಜಿಕ ಅಸಮಾನತೆ ಎದ್ದು ತೋರುತ್ತಿದ್ದು, ಈ ಅಸಮಾನತೆಯನ್ನು ಸರಿದೂಗಿಸುವುದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೊಣೆಯಾಗಿದ್ದು ತಮ್ಮನ್ನು ಶಾಸಕರನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿದ್ದು.

ಅಲ್ಲದೇ ತಾವು ಜೆಡಿಎಸ್ ಪಕ್ಷದಲ್ಲಿ ಈಗಾಗಲೇ ಹಲವಾರು ಗುರುತರ ಜವಾಬ್ದಾರಿಯನ್ನು ನಿರ್ವಹಿಸಿದ್ದು ತಮ್ಮನ್ನು ಆಂಗ್ಲೋ ಇಂಡಿಯನ್ ಕೋಟಾದಡಿ ಮೈಸೂರು ಪ್ರಾಂತ್ಯದ ಪ್ರತಿನಿಧಿಯನ್ನಾಗಿ ನಾಮಕರಣಗೊಳಿಸಬೇಕೆಂದು ಸಿಎಂ ಕುಮಾರಸ್ವಾಮಿಯವರಿಗೆ, ಉಪಮುಖ್ಯಮಂತ್ರಿ ಪರಮೇಶ್ವರ್, ಕೆ.ಜೆ.ಜಾರ್ಜ್, ಆಸ್ಕರ್ ಫರ್ನಾಂಡಿಸ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸ್ವಾಮಿ, ಜಮೀರ್, ಸುಂದರ್ ಡಿಸೋಜ, ವಿನ್ಸೆಂಟ್ ಸುದ್ದಿಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: