ಮೈಸೂರು

‘ಸ್ಯಾಮ್ ಅಂದ್ರೆ ಸ್ಯಾಮುಯೆಲ್’ ನಾಟಕ ಪ್ರದರ್ಶನ ನಾಳೆ

ಮೈಸೂರು,ಅ.23 : ಸಹಜರಂಗವು ನಡೆಸಿದ ರಂಗತರಬೇತಿ ಶಿಬಿರದ ಸಮಾರಂಭ ಸಮಾರಂಭವನ್ನು ನಾಳೆ (24) ಸಂಜೆ 6.30ಕ್ಕೆ ಕಿರುರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ನೀನಾಸಂ ರಂಗ ನಿರ್ದೇಶಕ ಕೆ.ಜಿ.ಮಹಾಬಲೇಶ್ವರ, ರೈತ ಮುಖಂಡ ಬಡಗಲಪುರ ನಾಗೇಂದ್ರ, ನಿರಂತರದ ಪ್ರಸಾದ್ ಕುಂದೂರು ಅವರುಗಳು ಹಾಜರಿರಲಿದ್ದಾರೆ.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಶಿಬಿರದಲ್ಲಿ ಕಲಿತ ‘ಸ್ಯಾಮ್ ಅಂದ್ರೆ ಸ್ಯಾಮುಯೆಲ್’ ಎಂಬ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ನಾಟಕವು ಅಡಿಗರ ಪದ್ಯವೊಂದರ ಆಧಾರಿತದಲ್ಲಿ ಕಟ್ಟಿದ್ದು, ಆಮೆರಿಕಾದ ಆಧುನಿಕ ನಾಗರೀಕತೆಗೆ ಮಾರು ಹೋದ ಸ್ಯಾಮ್ ಎಂಬ ಯುವಕ ಅನೇಕ ವರ್ಷಗಳ ನಂತರ ತನ್ನ ಹಳ್ಳಿಗೆ ಮರಳಿದಾಗ ಅಲ್ಲಿನ ಸಹಜ ಬದುಕಿಗೆ ಮುಖಾಮುಖಯಾಗುವ ಸಂದರ್ಭವೇ ಕಥಾ ವಸ್ತು ವಿಷಯವಾಗಿದ್ದು, ಸೋಮಶೇಖರ್ ಸಿರಾ ಮತ್ತು ಕಿರಣ್ ಅವರು ನಿರ್ದೇಶನ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: