
ಮೈಸೂರು
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿ: ಪ್ರತಿಭಟನೆ
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಮೈಸೂರಿನ ಗೋರ್ ಸೇನಾ ಸಂಘಟನೆ ಪ್ರತಿಭಟನೆ ನಡೆಸಿತು.
ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ನ್ಯಾ. ಎ.ಜೆ. ಸದಾಶಿವ ಆಯೋಗದಿಂದ ರಚಿತವಾಗಿರುವ ವರದಿ ಪರಿಶಿಷ್ಟ ಜಾತಿಗಳಿಗೆ ಕಂಟಕವಾಗಿದೆ. ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವಂತಹ ಅವೈಜ್ಞಾನಿಕ ವರದಿಯಾಗಿದೆ. ಪರಿಶಿಷ್ಟ ಜನಾಂಗಗಳ ಆಶಯಕ್ಕೆ ಧಕ್ಕೆ ತರುವಂತಹ ಸರ್ಕಾರದಿಂದ ದೊರೆಯುತ್ತಿರುವ ಸವಲತ್ತುಗಳಿಂದ ವಂಚನೆ ಮಾಡಿ ಸೀಮಿತ ಜನಾಂಗಕ್ಕೆ ಅನುಕೂಲ ಮಾಡಿಕೊಡುವ ಮೂಲ ಉದ್ದೇಶದಿಂದ ರಚಿತವಾಗಿದ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿತು.
ಪ್ರತಿಭಟನೆಯಲ್ಲಿ ಗೋರ್ ಸೇನಾ ಸಮಿತಿಯ ಸಂಯೋಜಕ ರಾಮು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.