ಮೈಸೂರು

ರೈತರ ಬೆಳೆಸಾಲ ಮನ್ನಾ ಮಾಡಿ : ಪ್ರತಿಭಟನೆ

ರಾಜ್ಯದಲ್ಲಿ ಭೀಕರ ಬರಗಾಲವಿದ್ದು ರೈತರ ಬೆಳೆಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ ಮೈಸೂರಿನ ಭಾರತೀಯ ಕಿಸಾನ್ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೃಹತ್ ಕೈಗಾರಿಕೆ ಮತ್ತು ದೇಶದ ದೊಡ್ಡ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದ ರೀತಿಯಲ್ಲೇ, ರೈತರ ಹಾಗೂ ಸ್ವಸಹಾಯ ಕೃಷಿ ಕಾರ್ಮಿಕರು ವಿವಿಧ ನಿಗಮಗಳಲ್ಲಿ ಪಡೆದಿರುವ ಕೃಷಿ ಸಾಲವನ್ನು ಬಡ್ಡಿ ಸಹಿತ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದರಲ್ಲದೇ, ರೈತರ ಸರಣಿ ಸಾವಿಗೆ ಸರ್ಕಾರದ ನಿರ್ಣಯಗಳು, ಮಧ್ಯವರ್ತಿಗಳ ಪ್ರವೇಶ, ಮತ್ತು ಕೆಲವು ಅಧಿಕಾರಿಗಳ ಅಸಹಕಾರ ಹಾಗೂ ಭ್ರಷ್ಟಾಚಾರವೇ ಕಾರಣ ಎಂದು ಆರೋಪಿಸಿದರು. ಸರ್ಕಾರ ನಿಷ್ಕ್ರಿಯಗೊಂಡಿರುವ ಮಾರುಕಟ್ಟೆ ಆಯೋಗವನ್ನು ಜಾಗೃತಗೊಳಿಸಬೇಕು. ರೈತರ ಬೆಳೆಗೆ ಅನುಗುಣವಾಗಿ ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಗಂಡತ್ತೂರು ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

comments

Related Articles

error: