ಮೈಸೂರು

‘ಮನೆ ಮನೆ ಗೊಂಬೆ ಪ್ರದರ್ಶನ’ ಸ್ಪರ್ಧೆ : ಬಹುಮಾನ ವಿತರಣೆ 25.

ಮೈಸೂರು,ಅ.23 : 408ನೇ ದಸರಾ ಅಂಗವಾಗಿ ಜನನಿ ಟ್ರಸ್ಟ್ ವತಿಯಿಂದ ‘ಮನೆ ಮನೆ ಗೊಂಬೆ ಪ್ರದರ್ಶನ’ ಸ್ಪರ್ಧೆಯನ್ನು ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ಸುಮಾರು 46 ಮನೆಗಳು ಸ್ಪರ್ಧಿಗಳಾಗಿದ್ದವು.

ಈ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಅ.25ರ ಬೆಳಗ್ಗೆ 11 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ಒಂದು ಲಕ್ಷ ಗೊಂಬೆ ಪ್ರದರ್ಶನದ ಸ್ಥಳದಲ್ಲಿ ಏರ್ಪಡಿಸಲಾಗಿದೆ.

ನಾದೋಪಾಸನ ಗಾಯನ ತಂಡದ ಸಂಸ್ಥಾಪಕ ಅಧ್ಯಕ್ಷ ಡಿ.ಉದಯಶಂಕರ್ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಗಾಯತ್ರಿ ಸೇವಾ ಟ್ರಸ್ಟ್ ನ ಡಾ.ಎ.ರವಿಕಲ್ಯಾಣ ಚಕ್ರವರ್ತಿ ಇರುವರು. ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಇಂಡಿಯನ್ ಮೆಡಿಕಲ್ ಕೌನ್ಸಿಲ್ ಕಾರ್ಯದರ್ಶಿ ಡಾ.ಸುಜಾತಾ ರಾವ್ ಬಹುಮಾನ ವಿತರಿಸಲಿದ್ದಾರೆ. ಪಾಲಿಕೆ ಮಾಜಿ ಸದಸ್ಯ ಡಾ.ಎಂ.ಕೆ.ಅಶೋಕ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: