ಪ್ರಮುಖ ಸುದ್ದಿ

ಚೆಟ್ಟಳ್ಳಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ ಬಲ್ಲಾರಂಡ ಮಣಿ ಉತ್ತಪ್ಪ ಆಯ್ಕೆ

ರಾಜ್ಯ(ಮಡಿಕೇರಿ) ಅ.23 :- ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಲ್ಲಾರಂಡ ಮಣಿಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಮರದಾಳು ಎಸ್.ಉಲ್ಲಾಸ ಅವರು ಅವಿರೋಧವಾಗಿ ಆಯ್ಕೆಯಾದರು.

ನಿರ್ದೇಶಕರುಗಳಾಗಿ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಹೆಚ್.ಎಸ್ ತಿಮ್ಮಪ್ಪಯ್ಯ, ಕಣಜಾಲು ಕೆ.ಪೂವಯ್ಯ, ಪೇರಿಯನ ಎಸ್ ಪೂಣಚ್ಚ, ಬಟ್ಟೀರ ಕೆ.ಅಪ್ಪಣ್ಣ ಮಹಿಳಾ ಕ್ಷೇತ್ರದಿಂದ ಪುತ್ತರೀರ ಎಂ.ಸೀತಮ್ಮ ಮತ್ತು ಕೊಂಗೇಟಿರ ವಾಣಿಕಾಳಪ್ಪ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಶಾಂತಪ್ಪ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸೀತಮ್ಮ ಬಿ.ಕೆ, ಹಿಂದುಳಿದ ವರ್ಗ ಕ್ಷೇತ್ರದಿಂದ ಬಿ.ಎಂ.ಕಾಶಿ ಮತ್ತು ಟಿ.ಎಸ್ ಧನಂಜಯ ಕಾರ್ಯ ನಿರ್ವಹಿಸಲಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: