ದೇಶಪ್ರಮುಖ ಸುದ್ದಿ

ಚೆಕ್’ಬುಕ್‍’ನಲ್ಲಿ ಆಧಾರ್ ಕಡ್ಡಾಯ; ಕೇಂದ್ರ ಸರ್ಕಾರ ಚಿಂತನೆ

ನವದೆಹಲಿ: ಚೆಕ್‍ ಮೂಲಕ ನಡೆಯುವ ಹಣಕಾಸಿನ ವ್ಯವಹಾರಗಳ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರವು ಆಧಾರ್ ಸಂಖ್ಯೆ ಬಳಸಿಕೊಳ್ಳಲು ಗಂಭೀರ ಚಿಂತನೆ ನಡೆಸಿದೆ.

ಹಳೇ ನೋಟು ನಿಷೇಧದ ನಂತರ ಸಂಘ-ಸಂಸ್ಥೆಗಳು ಅಥವಾ ವೈಯಕ್ತಿಕ ಖಾತೆಗಳಲ್ಲಿ ಆಗಿರುವ ಭಾರೀ ವಹಿವಾಟು ಗಮನಿಸಿರುವ ಸರ್ಕಾರವು, ಎಲ್ಲ ಚೆಕ್‍ಗಳ ಮೇಲೆ ಆಧಾರ್ ಸಂಖ್ಯೆ ಮುದ್ರಿಸಿ ಹಣದ ಅಡ್ಡಾದಿಡ್ಡಿ ಹರಿವನ್ನು ನಿಯಂತ್ರಿಸುವ ಇರಾದೆ ಹೊಂದಿದೆ.

ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಾದ ಸ್ಟೇಟ್‍ ಬ್ಯಾಂಕ್ ಆಫ್ ಇಂಡಿಯ, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸಿದೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಚೆಕ್ ಚಲನ್‍ನಲ್ಲಿ ಬ್ಯಾಂಕ್ ವಿವರದ ಜೊತೆ ಗ್ರಾಹಕರ ಹೆಸರು ಮತ್ತು ಖಾತೆ ಸಂಖ್ಯೆಯನ್ನು ನಮೂದಿಸಲಾಗುತ್ತಿದೆ. ಈ ಯೋಜನೆಯ ಕುರಿತು ಅಧಿಕೃತ ಆದೇಶ ಹೊರಬೀಳುವವರೆಗೆ ಚೆಕ್‌ ಮೂಲಕ ವಹಿವಾಟು ನಡೆಸುವಾಗ ಚೆಕ್‌ ಹಾಳೆಯಲ್ಲಿ ಆಧಾರ್‌ ಸಂಖ್ಯೆ ಬರೆಯುವಂತೆ ಬ್ಯಾಂಕುಗಳು ಗ್ರಾಹಕರಿಗೆ ಸೂಚಿಸಬಹುದು. ಬ್ಯಾಂಕ್ ಆಫ್ ಬರೋಡ ಈಗಾಗಲೇ ತಾನು ಸಂಗ್ರಹಿಸಿರುವ ಖಾತೆದಾರರ ಆಧಾರ್ ಸಂಖ್ಯೆಯನ್ನು ಚೆಕ್ ಪುಸ್ತಕಗಳಲ್ಲಿ ನಮೂಸಿಸಲು ಆರಂಭಿಸಿದೆ.

ಐನೂರಕ್ಕೂ ಹೆಚ್ಚು ಯೋಜನೆಗಳಿಗೆ ನೇರ ಹಣ ವರ್ಗಾವಣೆ ನಿಯಮ ಕಡ್ಡಾಯ ಮಾಡುವ ಇರಾದೆ ಕೇಂದ್ರ ಸರ್ಕಾರಕ್ಕಿದೆ. ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ ಮಾಡುವುದರಿಂದ ಕೇಂದ್ರ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ನೇರ ಪ್ರಯೋಜನ ತಲುಪಿಸಲು ಆಧಾರ್ ಸಂಖ್ಯೆ ಜೋಡಣೆ ಬಹಳ ಉಪಕಾರಿಯಾಗಿದೆ. ಈಗಾಗಲೇ 14 ಕೊಟಿ ಆಧಾರ್ ಸಂಖ್ಯೆಗಳನ್ನು ಮೊಬೈಲ್ ಫೋನ್ ಮತ್ತು ಬ್ಯಾಂಕ್ ಖಾತೆಗಳಿಗೆ ಜೋಡಿಸಲಾಗಿದೆ. ಮಾರ್ಚ್‍ ತಿಂಗಳ ಅಂತ್ಯದೊಳಗೆ ಎಲ್ಲ ಸಂಖ್ಯೆಗಳನ್ನೂ ಜೋಡಿಸುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.

Leave a Reply

comments

Related Articles

error: