ಮೈಸೂರು

ಆಸ್ಪತ್ರೆಗೆ ಬಂದು ನೋಡಿಹೋಗಿಲ್ಲವೆಂದು ರಾಜೀನಾಮೆ ನೀಡುತ್ತಾರಾ? ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್

ಮೈಸೂರು,ಅ.24;- ಯಾರಾದರೂ ಆಸ್ಪತ್ರೆಗೆ ಬಂದು ನೋಡಿಹೋಗಿಲ್ಲವೆಂದು ರಾಜೀನಾಮೆ ನೀಡುತ್ತಾರಾ? ಕ್ಷುಲ್ಲಕ ಕಾರಣಗಳಿಗೆ ರಾಜೀನಾಮೆ ನೀಡುವಂತವನಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಅವರ ನಿವಾಸದಲ್ಲಿಂದು ಜೆ.ಡಿ.ಎಸ್ ರಾಜಾಧ್ಯಕ್ಷರಾದ ಹೆಚ್.ವಿಶ್ವನಾಥ್ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಕುರಿತು ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಕೆಲವು ಸ್ನೇಹಿತರುಗಳು ಮಾಧ್ಯಮದ ಮೂಲಕ ಅಪಪ್ರಚಾರ ಮಾಡಿದ್ದಾರೆ. ಯಾರಾದರೂ ಹಾಸ್ಪಿಟಲ್ ಗೆ ಬಂದು ನೋಡಲಿಲ್ಲವೆಂದು ರಾಜೀನಾಮೆ ನೀಡುತ್ತಾರಾ? ಅಲ್ಲದೇ ನಾನು ಅಂತಹ ಊಹಾಪೋಹಗಳ ವಿರುದ್ಧ ಹೋರಾಟ ಮಾಡುವವನು. ಇಂತಹ ಕ್ಷುಲ್ಲಕ ವಿಚಾರಗಳಿಗೆ ರಾಜೀನಾಮೆ ಕೊಡುವಂತಹನಲ್ಲ. ಇಂತಹ ಪ್ರಚಾರ ಮಾಡುವ ಸ್ನೇಹಿತರಿಗೆ ಕೈ ಮುಗಿದು ಕೇಳುತ್ತೇನೆ ಇದನ್ನು ನಿಲ್ಲಿಸಿ ಒಬ್ಬ ರಾಜಕೀಯ ವ್ಯಕ್ತಿಯ ಹರಣ ಮಾಡುವುದು ಸರಿಯಲ್ಲ ಎಂದರು. ತಮಗೆ ಜೆಡಿಎಸ್ ನಲ್ಲಿ ಉಸಿರುಕಟ್ಟುವ ವಾತವರಣವಿದೆ ಎನ್ನಲಾಗುತ್ತಿದೆ ಎಂದಿದ್ದಕ್ಕೆ ಇದನ್ನೆಲ್ಲ ಹೇಳಿದವರು ಯಾರು? ಮಾಧ್ಯಮದವರೇ ಪ್ರಚಾರ ಮಾಡಿ ಮತ್ತೆ ನಮ್ಮನ್ನೇ ಕೇಳುತ್ತೀರ? ಯಾರಿಗೂ ಹೀಗಾಗಿಲ್ಲ ಜನರ ತೀರ್ಪಿನ ಮೇಲೆ ಹೋಗುತ್ತದೆ. ಜೆಡಿಎಸ್, ಕಾಂಗ್ರೆಸ್. ಸಮ್ಮಿಶ್ರ ಇದೆಲ್ಲ ಜನರ ತೀರ್ಪಿನ ಮೇಲೆ ಇರುವುದು ಎಂದರು. ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ನಾವೆಲ್ಲ ಗೆದ್ದೆವೆಂದು ಹೇಳಲು ನಾವ್ಯಾರು. ಇವೆಲ್ಲ ಮತದಾರರ ಮೇಲೆ ನಿಂತಿದೆ. ಇವೆಲ್ಲ ಮತದಾರರ ಇಚ್ಛೆ ಎಂದರು.

ಜೆಡಿಎಸ್ ವರಿಷ್ಠರಿಗೆ ವಾಲ್ಮೀಕಿ ಪ್ರಶಸ್ತಿ ಲಭಿಸಿರುವುದು ಸಂತೋಷ. ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಕೊಡಿಸುವಲ್ಲಿ ಮಾಜಿ ಪ್ರಧಾನಿ ದೇವೆಗೌಡರು ತುಂಬಾ ಶ್ರಮಿಸಿದ್ದಾರೆ ಎಂದರಲ್ಲದೇ, ಇದೇ  ತಿಂಗಳ 29-30 ರಿಂದ ಶಿವಮೊಗ್ಗಕ್ಕೆ ಉಪಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: