ಪ್ರಮುಖ ಸುದ್ದಿ

ನಮ್ಮ ಮೈತ್ರಿಯನ್ನು ಅನೈತಿಕ ರಾಜಕಾರಣ ಅಂತ ಹೇಳುವವರಿಗೆ ನೈತಿಕತೆ ಇಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯ(ಮಂಡ್ಯ)ಅ.24:- ನಾವು ಉಪಚುನಾವಣೆ ಬರುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಮೈತ್ರಿಯನ್ನು ಅನೈತಿಕ ರಾಜಕಾರಣ ಅಂತಾರೆ ಅದನ್ನು ಹೇಳೋಕೆ ಅವರಿಗೆ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಶ್ಮೀರ ದಲ್ಲಿ ಪಿಡಿಪಿಯನ್ನು ಚುನಾವಣಾ ಸಂದರ್ಭದಲ್ಲಿ ಭಯೋತ್ಪಾದಕರ ಜೊತೆ ನಂಟಿರುವ ಪಕ್ಷ ಎಂದಿದ್ದರು. ಅಧಿಕಾರಕ್ಕಾಗಿ ಪಿಡಿಪಿ ಕಾಲಿಡಿದು ಅಧಿಕಾರ ಪಡೆದುಕೊಂಡರು. ಬಿಹಾರ ದಲ್ಲಿ ನಿತೀಶ್ ಕುಮಾರ್ ಬೈತಿದ್ದ ಬಿಜೆಪಿ ಕೊನೆಗೆ ಜೆಡಿಯು ಜೊತೆಯೇ ಮೈತ್ರಿ ಮಾಡಿಕೊಂಡಿತು. ಹೀಗಿರುವಾಗ ಬಿಜೆಪಿ ಗೆ ನಮ್ಮ ಮೈತ್ರಿ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ರಾಜ್ಯದಲ್ಲಿ ನಾವು ಜೆಡಿಎಸ್ ಬೈದಾಡಿದ್ದೇವೆ. ಈಗ ಮೈತ್ರಿ ಆಗಿದ್ದೇವೆ ಆದರೆ ಸಿದ್ದಾಂತವನ್ನು ಮಾರಿಕೊಂಡಿಲ್ಲ. ನಾವು ಕೋಮುವಾದಿಗಳ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ನಮ್ಮ ಮತ ವಿಭಜನೆಯಿಂದ ಕೋಮುವಾದಿಗಳಿಗೆ ಲಾಭ ಆಗಬಾರದೆಂದು ಈ ಮೈತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿ ಗೆದ್ದರೆ ದಲಿತರು, ಅಲ್ಪಸಂಖ್ಯಾತರು ನೆಮ್ಮದಿಯ ಜೀವನ ಮಾಡಲು ಆಗಲ್ಲ. ದೇಶದಲ್ಲೂ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತೈಲ, ಅನಿಲ ಬೆಲೆ ಹೆಚ್ಚಾಗಿದೆ. ತೈಲ ಬೆಲೆ ಏರಿಕೆಗೆ ಕೆಟ್ಟ ಆರ್ಥಿಕ ನೀತಿ ಕಾರಣ. ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಮೋದಿ ಕಪ್ಪು ಹಣ ವಾಪಸ್ ಬರುತ್ತೆ ಅಂದಿದ್ದರು. ಆದರೆ 20 % ರಷ್ಟೂ ಕಪ್ಪು ಹಣ ವಾಪಸ್ ಬರ್ಲಿಲ್ಲ. ರಕ್ಷಣಾ ಇಲಾಖೆ ಇತಿಹಾಸದಲ್ಲಿ 40 ಸಾವಿರದಷ್ಟು ದೊಡ್ಡ ಹಗರಣ ಆಗಿರಲಿಲ್ಲ. ಆದರೆ ರೆಫೆಲ್ ಹಗರಣ ನಡೆದಿದೆ. ದೇಶದ ಜನ ಕೆಲಸ ಕೇಳಿದರೆ ಬಿಜೆಪಿಯವರು ಪಕೋಡ ಮಾರಿ ಅಂತಾರೆ. ಜೊತೆಗೆ ಕಪ್ಪು ಹಣ ವಾಪಸ್ ತರಲು ಬಿಜೆಪಿ ವಿಫಲವಾಗಿದೆ ದೇಶದ ಆರ್ಥಿಕ ಪರಿಸ್ಥಿತಿ ದುಸ್ಥರವಾಗಿದೆ ಎಂದರು.

ಕಾಂಗ್ರೆಸ್ ಹೈಕಮಾಂಡ್ ಕೋಮುವಾದಿ ಬಿಜೆಪಿ ಹೊರಗಿಡಲು ಸೂಚಿಸಿದ್ದರಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡೆವು. ಸಮ್ಮಿಶ್ರ ಸರ್ಕಾರ ರಚನೆ ಮಾಡಿದಾಗಲೇ ಮುಂದಿನ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ಆಗಿತ್ತು. ರಾಹುಲ್ ಗಾಂಧಿ ಉದ್ದೇಶ ದೇಶದಲ್ಲಿ ಜಾತ್ಯಾತೀತ ಶಕ್ತಿಗಳನ್ನು ಒಗ್ಗೂಡಿಸಬೇಕು. ಕೋಮುವಾದಿಗಳು‌ ಅಧಿಕಾರಕ್ಕೆ ಬರಬಾರದೆಂಬುದಾಗಿದೆ. ಅವರು ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕ ಸ್ಥಿತಿ ಕುಸಿದಿದೆ. ವಚನ ಭ್ರಷ್ಟರಾಗಿದ್ದಾರೆ, ನಿರುದ್ಯೋಗ ಪರಿಸ್ಥಿತಿ ಎದುರಾಗಿದೆ. ಭಾರತದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಾರದು. ಆ ನಿಟ್ಟಿನಲ್ಲಿ ನಾವು ಜೆಡಿಎಸ್‌‌ ಸೀಟು ಹಂಚಿಕೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಎಲ್ಲಾ ಕಾಂಗ್ರೆಸ್ಸಿಗರು ಒಕ್ಕೊರಲಿನಿಂದ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ರನ್ನು ಗೆಲ್ಲಿಸ್ತೀವಿ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲ್ಸ ಮಾಡ್ತಾರೆ. ಮಂಡ್ಯ ಕಾಂಗ್ರೆಸ್ ನಲ್ಲಿ ಯಾವುದೇ ಬಂಡಾಯ ಇಲ್ಲ. ಶಿವರಾಮೇಗೌಡ ಗೆಲ್ಲಿಸಲು ಮಂಡ್ಯ ಕಾಂಗ್ರೆಸ್ ಒಗ್ಗೂಡಿ ಕೆಲ್ಸ ಮಾಡ್ತೇವೆ. ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ದೊಡ್ಡ ಅಂತರದಿಂದ ಗೆಲ್ತಾರೆ. ಮಂಡ್ಯ ದಲ್ಲಿ ಬಿಜೆಪಿ ಗೆ ಅಸ್ತಿತ್ವವೇ ಇಲ್ಲ. ಹಳೇ ಮೈಸೂರಲ್ಲಿ ಚಾಮರಾಜನಗರ ಬಿಟ್ಟರೆ ಇನ್ನೆಲ್ಲೂ ಬಿಜೆಪಿ ಇಲ್ಲ. ನಮ್ಮ ಕಾರ್ಯಕರ್ತರು ಭಿನ್ನಾಭಿಪ್ರಾಯ ಬಿಡಿ ಶಿವರಾಮೇಗೌಡ ರನ್ನು ಗೆಲ್ಲಿಸಿ ಎಂದರು.

ಬಿಜೆಪಿ ಯಾವ ವರ್ಗದ ಜನಕ್ಕೂ ನ್ಯಾಯ ಕೊಟ್ಟಿಲ್ಲ. ಕೋಮುವಾದಕ್ಕೆ ಮಾತ್ರ ಕುಮ್ಮಕ್ಕು ಕೊಟ್ಟಿದೆ.ದೇಶ ಹಾಳು ಮಾಡುವವರು ಅಧಿಕಾರಕ್ಕೆ ಬರಬಾರದು.ಐದು ಕ್ಷೇತ್ರದಲ್ಲಿ ನಾವು ಗೆಲ್ತೇವೆ.ಜಮಖಂಡಿ, ಬಳ್ಳಾರಿ ಕಾಂಗ್ರೆಸ್ ಮಂಡ್ಯ, ಶಿವಮೊಗ್ಗ, ರಾಮನಗರ ಜೆಡಿಎಸ್ ಗೆದ್ದೆ ಗೆಲ್ಲುತ್ತೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಗೆಲುವು ಶತಸಿದ್ದ. ನಮ್ಮ ಕಾರ್ಯಕರ್ತರು ಹಿಂದೆ ನಡೆದ ಘಟನೆಗಳನ್ನು ಮರೆಯಬೇಕು ನಮ್ಮ ದೊಡ್ಡ ಎದುರಾಳಿ ಬಿಜೆಪಿಯನ್ನು ನಾಡು, ದೇಶದ ಹಿತದೃಷ್ಟಿಯಿಂದ ಸೋಲಿಸಿ ಎಂದು ಕರೆ ನೀಡಿದರು.

ನಮಗೆ ಮತ್ತೆ ಅಧಿಕಾರಕ್ಕೆ ಬರ್ತೇವೆ ಎಂಬ ವಿಶ್ವಾಸ ಇತ್ತು. ಆದರೆ ಆಗ್ಲಿಲ್ಲ. ನಾವು ಜೆಡಿಎಸ್ ಹಾವು- ಮುಂಗುಸಿ ಥರ ಇದ್ವಿ. ಈಗ ಅದನ್ನೆಲ್ಲಾ ಮರೆತಿದ್ದೇವೆ. ಮಂಡ್ಯ ಜೆಡಿಎಸ್- ಕಾಂಗ್ರೆಸ್ ನಡುವೆ ಸ್ವಾಭಿಮಾನಕ್ಕೆ ಧಕ್ಕೆ ಆಗುವ ಮಾತಿಲ್ಲ.ಸ್ವಾಭಿಮಾನ, ಸಿದ್ದಾಂತ ಹೊಂದಾಣಿಕೆ ಇಲ್ಲ. ಪಕ್ಷ ಹೊಂದಾಣಿಕೆ ಮಾತ್ರ.ನಮ್ಮ ಮುಖಂಡರು ಕನಸು, ಮನಸ್ಸಿನಲ್ಲೂ ಕೋಮುವಾದಿ ಬಿಜೆಪಿ ಗೆ ಮತ ಹಾಕಲ್ಲ. ಸಮಾವೇಶದ ಪೋಸ್ಟರ್ ಗಳಲ್ಲಿ ಜೆಡಿಎಸ್, ಕಾಂಗ್ರೆಸ್ ನಾಯಕರ ಫೋಟೋ ಇರಬೇಕಂತ ಏನಿಲ್ಲ. ಸಾಲ ಮನ್ನಾ ಬಗ್ಗೆ ಸಮ್ಮಿಶ್ರ ಸರ್ಕಾರ ತೀರ್ಮಾನ ಮಾಡಿದೆ. ನಾನು ಹಿಂದೆ ಸಾಲ ಮನ್ನಾ ಮಾಡಿದ್ದೆ. ಎಚ್ಡಿಕೆ ಸಹ ಸಾಲ ಮನ್ನಾ ಮಾಡಿದ್ದಾರೆ. ರೈತರಿಗೆ ಸಮಸ್ಯೆ ಇದ್ದರೆ ಆತ್ಮಹತ್ಯೆ ಪರಿಹಾರ ಅಲ್ಲ. ಯಡಿಯೂರಪ್ಪ ಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನು ಗೊತ್ತಿಲ್ಲ. ಬಿಜೆಪಿ ಗೆ ಸತ್ಯ ಹೇಳೋದೆ ಗೊತ್ತಿಲ್ಲ. ಸುಳ್ಳನ್ನು ನಿಜ ಮಾಡೋದು ಸತ್ಯನ ಸುಳ್ಳು ಮಾಡೋದೆ ಬಿಜೆಪಿ ಕೆಲಸ. ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರು ಅಸ್ತಿತ್ವ ಕಳೆದುಕೊಳ್ಳಲ್ಲ. ಅಸ್ತಿತ್ವ ಉಳಿಸಿಕೊಂಡು ಜೆಡಿಎಸ್ ಗೆಲ್ಲಿಸ್ತಾರೆ. ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ತಕ್ಷಣ ನಿರ್ನಾಮ ಆಗುತ್ತೆ ಅನ್ನೋದು ಸುಳ್ಳು. 2013ರಲ್ಲಿ ಯಡಿಯೂರಪ್ಪ ನಮ್ಮಪ್ರಾಣೆ ಅವ್ರಾಣೆ ಬಿಜೆಪಿ ಗೆ ಹೋಗಲ್ಲ ಅಂದಿದ್ದರು. 2013ರಲ್ಲಿ ಶ್ರೀರಾಮುಲು ಎಲ್ಲಿದ್ದ. ಯಡಿಯೂರಪ್ಪ ಬಿಜೆಪಿ ಬಿಟ್ಟ ಮೇಲೆ ಪಕ್ಷ ಶುದ್ದವಾಗಿದೆ ಎಂದು ಹೇಳಿರಲಿಲ್ವಾ ಬಿಜೆಪಿ ಯವ್ರು ಸರಿಯಾಗಿದ್ದಾರಾ ಎಂದು ಪ್ರಶ್ನಿಸಿದರು.

3 ನೇ ತಾರೀಖು ರಾಜ್ಯದಲ್ಲಿ 3 ಲೋಕಸಭಾ ಕ್ಷೇತ್ರ ಹಾಗೂ 2 ವಿಧಾನ ಕ್ಷೇತ್ರಗಳಿಗೆ ಉಪ ಚುನಾವಣೆ ನಡೀತಿದೆ.ಕಳೆದ ಚುನಾವಣೆಯಲ್ಲಿ ರಾಜ್ಯದ ಜನರು ಯಾವ ಪಕ್ಷಕ್ಕೂ ಬಹುಮತ ಕೊಟ್ಟಿಲ್ಲ. ನಾವು ಅಧಿಕಾರದಲ್ಲಿದ್ದ ಪಕ್ಷ. ನಮಗೆ 38% ವೋಟ್ ಬಂತು. ಬಿಜೆಪಿ 36 % ವೋಟು ಜೆಡಿಎಸ್ ಗೆ 19% ವೋಟು ಬಂತು. ಆದರೂ ಬಿಜೆಪಿ ಏಕೈಕ ದೊಡ್ಡಪಕ್ಷವಾಗಿ ಹೊರ ಹೊಮ್ಮಿತ್ತು. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡೋ ಸಲುವಾಗಿ ಸಮ್ಮಿಶ್ರ ರಚನೆ ಮಾಡಿದ್ವಿ.ಈಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಜಾರಿಯಲ್ಲಿದೆ. ಮುಂದಿನ‌ ಲೋಕಸಭಾ  ಚುನಾವಣೆಯಲ್ಲಿ ಮೈತ್ರಿಗೆ ಈಗಾಗಲೇ  ಮಾತುಕತೆ ಆಗಿದೆ. ಕಾಂಗ್ರೆಸ್ ಪಕ್ಷದ ಉದ್ದೇಶ ಇಡೀ ದೇಶದಲ್ಲಿ ಜ್ಯಾತ್ಯಾತೀತ ಶಕ್ತಿ ಒಗ್ಗೂಡಿಸಿ ಕೋಮುವಾದಿ ಪಕ್ಷದ ದೂರವಿಡಬೇಕು ಅನ್ನೋದೆ ಆಗಿದೆ. ಕೋಮುವಾದಿ ಪಕ್ಷ ಅಧಿಕಾರಕ್ಕೆ ಬಂದಮೇಲೆ ದೇಶದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಭರವಸೆ ತಪ್ಪಿದ್ದಾರೆ‌. ಜನ್ರಲ್ಲಿ ಕೋಮುವಾದಿ ಭಾವನೆ ಬಿತ್ತುತ್ತಿದ್ದಾರೆ.‌ ಆ ಕಾರಣದಿಂದ ನಾವು ಮೈತ್ರಿ ಮಾಡಿಕೊಂಡು ಕರ್ನಾಟಕದಿಂದ ಚಾಲನೆ ಕೊಡುತ್ತಿದ್ದೇವೆ‌. ಈಗಾಗಲೇ ಲೋಕಸಭೆಯ ಸೀಟು ಹಂಚಿಕೆ ಕೂಡ ಮಾತುಕತೆ ಆಗಿದೆ. ಈ ಉಪ ಚುನಾವಣೆಯಲ್ಲಿ ಮೂರು ಕಡೆ ನಮ್ಮ ಪಕ್ಷದವರೇ ಗೆದ್ದಿದ್ದರು. ಮಂಡ್ಯದಲ್ಲಿ ಜೆಡಿಎಸ್  ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ಬಿಜೆಪಿ  ಗೆದ್ದಿತ್ತು. ನಾವು ಈ ಉಪ ಚುನಾವಣೆ  ನಿರೀಕ್ಷೆ ಮಾಡಿರಲಿಲ್ಲ.ಆದರೂ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ ಎಂದರು.

ಒಗ್ಗೂಡಿದ ಕೈ ನಾಯಕರು

ಒಂದೇ ವೇದಿಯಲ್ಲಿ ಕಾಂಗ್ರೆಸ್ ನಾಯಕರು ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ  ಮುಖಂಡರಾದ ಡಾ.ಹೆಚ್.ಸಿ.ಮಹದೇವಪ್ಪ, ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ರಾಮಕೃಷ್ಣ, ರವಿ ಗಣಿಗ, ಕೆ.ಬಿ‌.ಚಂದ್ರಶೇಖರ್, ಆತ್ಮಾನಂದ ಸಿದ್ದರಾಮಯ್ಯನವರ ಜೊತೆ ಕಾಣಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: