ಲೈಫ್ & ಸ್ಟೈಲ್

ಮೈಗ್ರೇನ್ ಬಾರದಿರಲು ಹೀಗೆ ಮಾಡಿ

ಮೈಗ್ರೇನ್ ಒತ್ತಡ ಹಾಗೂ ಸೂರ್ಯನ ಅತಿಯಾದ ಬೆಳಕಿನಿಂದ ಬರಲಾರದು. ಸರಿಯಾದ ಆಹಾರ ಸೇವಿಸದೇ ಇರುವುದರಿಂದ ಮೈಗ್ರೇನ್ ವಕ್ಕರಿಸುವ ಸಾಧ್ಯತೆ ಹೆಚ್ಚಿದೆ

ಮೈಗ್ರೇನ್ ನಲ್ಲಿ ಎರಡು ವಿಧವಿದ್ದು ಮುಂದಲೆ ಮತ್ತು ತಲೆಯ ಹಿಂಭಾಗದಲ್ಲಿ, ಕಣ್ಣಿನ ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಕೇವಲ ಹಣ್ಣಿನ ಜ್ಯೂಸ್ ಅಥವಾ, ಚಾಕಲೇಟ್ ಸೇವನೆಯಿಂದಲೂ ಮುಂದಲೆಯ ಮೈಗ್ರೇನ್ ಬರಬಹುದು.  ಶರೀರದಲ್ಲಿ ಹೇರಳವಾಗಿ ಶೇಖರಗೊಂಡ ಪ್ರೋಟೀನ್ ಕಾರಣದಿಂದ ತಲೆಯ ಹಿಂಭಾಗದಲ್ಲಿ ಮೈಗ್ರೇನ್ ಕಾಣಿಸಿಕೊಳ್ಳಬಹುದು. ಮುಂದಲೆಯಲ್ಲಿ ಮೈಗ್ರೇನ್ ಕಾಣಿಸಿಕೊಂಡಾಗ ಬೇಯಿಸಿದ ಸೊಪ್ಪು-ತರಕಾರಿಗಳನ್ನೇ ತಿನ್ನಬೇಕು. ನಿಮಗೆ ಹೆಚ್ಚು ಮೊಟ್ಟೆ ಮತ್ತು ಉಪ್ಪು ತಿನ್ನುವ ಅಭ್ಯಾಸವಿದ್ದಲ್ಲಿ ಕೂಡ ಮೈಗ್ರೇನ್ ಕಾಣಿಸಿಕೊಳ್ಳಬಹುದು. ಮೈಗ್ರೇನ್ ಬರುವವರು ಲಿಕ್ವಿಡ್ ನಂತಹ ಸೂಪ್, ಲಿಂಬೂ ಜ್ಯೂಸ್, ಎಳನೀರು, ಲಸ್ಸಿಗಳನ್ನು ಸೇವಿಸಿ. ಚಹಾ, ಕಾಫಿ ಕೋಲ್ಡ್ ಡ್ರಿಂಕ್ಸ್ ಗಳಿಂದ ದೂರವಿರಿ. ಇದನ್ನು ಸೇವಿಸುವುದರಿಂದಲೂ ಮೈಗ್ರೇನ್ ಬರಬಹುದು. ಆಲ್ಕೋಹಾಲ್ ಮತ್ತು ಚಾಕಲೇಟ್ ಸೇವನೆಯಿಂದಲೂ ದೂರವಿರಿ. ತೈಲ-ಮಸಾಲೆಯುಕ್ತ ಆಹಾರ ಸೇವನೆ, ಉಪವಾಸಗಳಿಂದಲೂ ಮೈಗ್ರೇನ್ ಬರುವ ಸಾಧ್ಯತೆಯಿದೆ. (ಎಸ್.ಎಚ್)

Leave a Reply

comments

Related Articles

error: