ಮೈಸೂರು

ವ್ಯಕ್ತಿ ನೇಣಿಗೆ ಶರಣು

ವ್ಯಕ್ತಿಯೋರ್ವ ತನಗೆ ಸ್ವಂತ ಉದ್ಯೋಗವಿಲ್ಲ. ಬೇರೆಯವರನ್ನೇ ಅವಲಂಬಿಸಿರಬೇಕೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ.

ಯರಗನಹಳ್ಳಿ ನಿವಾಸಿ ಶರತ್(26) ನೇಣಿಗೆ ಶರಣಾದ ವ್ಯಕ್ತಿ. ಈತ ಹಲವು ದಿನಗಳಿಂದ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದ. ಆದರೆ ಎಲ್ಲಿಯೂ ಉದ್ಯೋಗ ಸಿಗದ ನಿರಾಶೆಯಿಂದ, ಖರ್ಚಿಗಾಗಿ ಬೇರೆಯವರನ್ನೇ ಅವಲಂಬಿಸಬೇಕೆಂಬ ಹಿನ್ನೆಲೆಯಲ್ಲಿ ಮನನೊಂದು ತನ್ನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಆಲನಹಳ್ಳಿ ಠಾಣೆಯ ಇನ್ಸಪೆಕ್ಟರ್ ಶೇಖರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: