
ದೇಶಪ್ರಮುಖ ಸುದ್ದಿ
ಬೆಂಗಳೂರಿನಲ್ಲಿ ಆ್ಯಪಲ್ ಉತ್ಪಾದನಾ ಘಟಕ: ಕಡಿಮೆ ಬೆಲೆಯಲ್ಲಿ ಕೈಗೆಟುಕಲಿದೆ ಐಫೋನ್
ಬೆಂಗಳೂರಿನಲ್ಲಿ ಆ್ಯಪಲ್ ಐಫೋನ್ ಉತ್ಪಾದನಾ ಘಟಕ ಆರಂಭಿಸಲು ತೈವಾನ್ ಕಂಪನಿಯೊಂದು ನಿರ್ಧರಿಸಿದೆ ಎನ್ನಲಾಗಿದೆ.
ತೈವಾನ್’ನ ಓಇಎಂ (ಒರಿಜಿನಲ್ ಎಕ್ವಿಪ್’ಮೆಂಟ್ ಮ್ಯಾನುಫ್ಯಾಕ್ಚರರ್ಸ್) ವಿಸ್ಟೋರ್ನ್ ಸಂಸ್ಥೆಯು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲು ಚಿಂತಿಸಿದೆ.
ಮುಂದಿನ ಏಪ್ರಿಲ್ ಒಳಗೆ ಕಾರ್ಯಾಚರಣೆ ಪ್ರಾರಂಭಿಸಲು ಕಂಪನಿ ತಯಾರಿ ನಡೆಸಿದ್ದು, 2017ನೇ ವರ್ಷದ ಕೊನೆಯ ಹೊತ್ತಿಗೆ ಇಲ್ಲಿ ತಯಾರಾದ ಐಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲ್ಲಿದೆ.
ಐಫೋನ್ ತಯಾರಿಕಾ ಘಟಕ ಸ್ಥಾಪಿಸಲು ಬೆಂಗಳೂರು ಪ್ರಶಸ್ತ ಜಾಗವಾಗಿದೆ. ಐಫೋನುಗಳ ಮೇಲೆ ಪ್ರಸ್ತುತ ಶೇಕಡಾ 12.5 ರಷ್ಟು ಆಮದು ಶುಲ್ಕ ವಿಧಿಸಲಾಗುತ್ತಿದ್ದು, ದೇಶದಲ್ಲೇ ತಯಾರಾಗುವ ಈ ಫೋನ್ಗಳು ಕಡಿಮೆ ದರದಲ್ಲಿ ಗ್ರಾಹಕರ ಕೈಗೆಟಕುವ ಸಾಧ್ಯತೆ ಇದೆ.