ಮೈಸೂರು

ಸಂಸ್ಮರಣೋತ್ಸವ ಸಮಿತಿಯಿಂದ ಆಕರ್ಷಕ ಮೆರವಣಿಗೆ

ನಾಡಪ್ರಭು ಕೆಂಪೇಗೌಡ ಸಂಸ್ಮರಣೋತ್ಸವ ಸಮಿತಿ ವತಿಯಿಂದ ಮೈಸೂರಿನಲ್ಲಿ ಕೆಂಪೇಗೌಡ ಮತ್ತು ಕುವೆಂಪು ಸಂಸ್ಮರಣೋತ್ಸವ ಆಕರ್ಷಕ ಮೆರವಣಿಗೆ ನಡೆಯಿತು.

ಶುಕ್ರವಾರ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಹೊರಟ ಆಕರ್ಷಕ ಮೆರವಣಿಗೆಯಲ್ಲಿ ವಿವಿಧ ಸ್ತಬ್ಧಚಿತ್ರ, ಡೊಳ್ಳುಕುಣಿತ, ಕಂಸಾಳೆ ಸೇರಿದಂತೆ ಹಲವು ಕಲಾತಂಡಗಳು ಭಾಗವಹಿಸಿ ದಾರಿಯುದ್ದಕ್ಕೂ ಜನರನ್ನು ಆಕರ್ಷಿಸಿದವು. ಪ್ರಮುಖ ಬೀದಿಯಲ್ಲಿ ಸಂಚರಿಸಿದ ಸಂಸ್ಮರಣೋತ್ಸವ ಮೆರವಣಿಗೆಯು ಜೆ.ಕೆ.ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ.

Leave a Reply

comments

Related Articles

error: