ಮೈಸೂರು

ವಿವಾಹಿತನೇ ಬೇಕೆಂದು ವರಿಸಿದ ಯುವತಿ!

ಮೈಸೂರು,ಅ.25;- ತನ್ನ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದ ವಿವಾಹಿತ ಸಹೋದ್ಯೋಗಿಯನ್ನೇ ಯುವತಿಯೋರ್ವಳು ವರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಯುವತಿಗೆ 18ತುಂಬಲು ಇನ್ನು ಕೆಲವೇ ತಿಂಗಳು ಬಾಕಿ ಇತ್ತು. ಆಕೆ ಕಚೇರಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಆಕೆಯ ಸಹೋದ್ಯೋಗಿಗೆ ಆಗಲೇ ವಿವಾಹವಾಗಿ ಎರಡು ಮಕ್ಕಳಿದ್ದರು. ಆದರೂ ಆತನ ಮೇಲೆ ಆಕೆಗೆ ಪ್ರೇಮಾಂಕುರವಾಗಿದೆ. ಇಬ್ಬರೂ ಒಟ್ಟಿಗೆ ಜೀವಿಸಲು ಆರಂಭಿಸಿದ್ದಾರೆ. ಇದನ್ನು ತಿಳಿದ ಯುವತಿಯ ಪೋಷಕರು ಕೋಪಗೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಯುವತಿಗಿನ್ನೂ 18ವರ್ಷ ತುಂಬದ ಕಾರಣ ಪೊಲೀಸರು ಅನಿವಾರ್ಯವಾಗಿ ಆಕೆಯ ಸಹೋದ್ಯೋಗಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: