
ಮೈಸೂರು
ಮೈಸೂರಿನಲ್ಲೂ ಮೀಟೂ ಪ್ರಕರಣ ಬೆಳಕಿಗೆ : ಲೈಂಗಿಕ ಕಿರುಕುಳ ನೀಡಿದ ಚಿಟ್ಸ್ ಕಂಪೆನಿಯ ಮ್ಯಾನೇಜರ್
ಮೈಸೂರು, ಅ.25:- ಚೀಟಿ ಹಣ ನೀಡಲು ಚಿಟ್ಸ್ ಕಂಪೆನಿಯ ಮ್ಯಾನೇಜರ್ ಓರ್ವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ನಗರದ ಮಹಿಳೆಯೊಬ್ಬರು ನಜರ್ ಬಾದ್ನಲ್ಲಿರುವ ಚಿಟ್ಸ್ ಕಂಪನಿಯೊಂದರಲ್ಲಿ 10 ಲಕ್ಷ ರೂ. ಚೀಟಿ ಹಾಕಿದ್ದರು. ಕಂಪನಿಯಿಂದ 10 ಲಕ್ಷ ರೂ ಚೀಟಿ ಪಡೆದಿದ್ದರು. ಇದರನ್ವಯ ಕಂಪನಿಯ ಮ್ಯಾನೇಜರ್ ಶೇ.30ರಷ್ಟು (3ಲಕ್ಷ) ಹಿಡಿದುಕೊಂಡು ಮಹಿಳೆಗೆ 7ಲಕ್ಷ ರೂ. ನೀಡಬೇಕಿತ್ತು. ಇದರಲ್ಲಿ ಒಮ್ಮೆ 5 ಲಕ್ಷವನ್ನು ಚೆಕ್ ಮೂಲಕ ನೀಡಿರುವ ಮ್ಯಾನೇಜರ್, ಉಳಿದ 2 ಲಕ್ಷ ಹಣವನ್ನು ಮಹಿಳೆ ಕೇಳಿದಾಗ, ಆಕೆಯನ್ನು ಸತಾಯಿಸಿದ್ದ. ಹಣ ಬೇಕಾದರೆ, ನನ್ನೊಂದಿಗೆ ಊಟಕ್ಕೆ ಬರಬೇಕು, ಹೈದ್ರಾಬಾದಿಗೆ ಟೂರ್ ಬರಬೇಕೆಂದು ಒತ್ತಾಯಿಸುವ ಮೂಲಕ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ನಜರ್ಬಾದ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮೈಸೂರಿನಲ್ಲೂ ಮೀಟೂ ಪ್ರಕರಣವೊಂದು ಬೆಳಕಿಗೆ ಬಂದಂತಾಗಿದೆ. (ಕೆ.ಎಸ್,ಎಸ್.ಎಚ್)