ಪ್ರಮುಖ ಸುದ್ದಿಮೈಸೂರು

ನ.1 ರಿಂದ 4ರವರೆಗೆ ರಾಷ್ಟ್ರೀಯ ಯುವ ಸಂಗೀತೋತ್ಸವ 2018

ರಾಷ್ಟ್ರ, ರಾಜ್ಯ ಮಟ್ಟದ ಯುವ ಕಲಾವಿದರನ್ನೊಳಗೊಂಡ 31 ಸಂಗೀತ ಕಛೇರಿಗಳು

ಮೈಸೂರು, ಅ,25 :  ಸಂಸ್ಕಾರ ಭಾರತೀ, ಗಣಪತಿ ಸಚ್ಚಿದಾನಂದ ಆಶ್ರಮ ಸಂಯುಕ್ತಾವಾಗಿ ಆಶ್ರಮದ ‘ನಾದ ಮಂಟಪ’ದಲ್ಲಿ ನ.1 ರಿಂದ 4ರವರೆಗೆ ‘ರಾಷ್ಟ್ರೀಯ ಯುವ ಸಂಗೀತೋತ್ಸವ’  ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಕಾರ ಭಾರತೀ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಪ.ರಾ. ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಂದು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅನೇಕರು ಆಸಕ್ತರಾಗುತ್ತಿದ್ದು, ಅನೇಕರು ಭಾರತೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಇವರುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಯುವ ಸಂಗೀತೋತ್ಸವ ಆಯೋಜಿಸಲಾಗಿದೆ. ನಾಲ್ಕು ದಿನಗಳ ಸಂಗೀತೋತ್ಸವದಲ್ಲಿ 31 ಸಂಗೀತ ಗೋಷ್ಠಿಗಳು ನಡೆಯಲಿದ್ದು, ವಾದನ ಗೋಷ್ಠಿಗಳು ಸಹ ನಡೆಯಲಿದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಈ ಹಿಂದೆ  2009ರಲ್ಲಿ ಆಯೋಜಿಸಿದ್ದ ಯುವ ಸಂಗೀತೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಈ ವರ್ಷ ಆಯೋಜಿಸಿರುವ  ಸಂಗೀತೋತ್ಸವವು ನ.1ರ ಬೆಳಗ್ಗೆ 10 ಗಂಟೆಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಲಿದ್ದಾರೆ, ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕಿರಿಯ ಸ್ವಾಮೀಜಿ ದತ್ತ ವಿಜಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.  ಸಂಸ್ಕಾರ ಭಾರತೀ ಸಂಸ್ಥಾಪಕ ಸಂಘಟನಾ ಮಂತ್ರಿ ಪದ್ಮಶ್ರೀ ಬಾಬಾ ಯೋಗೇಂದ್ರಜೀ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ ಕೃಷ್ಣದೇವರಾಯ, ಸಂಸದ ಪ್ರತಾಪ್ ಸಿಂಹ, ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನ.4ರಂದು ಸಮಾರೋಪ ಸಮಾರಂಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜ ಸಾನಿಧ್ಯ ವಹಿಸಲಿದ್ದು. ತಮಿಳುನಾಡು ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಡಾ.ಪ್ರಮೀಳಾ ಗುರುಮೂರ್ತಿ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಖ್ಯಾತ ಕೊಳಲುವಾದಕ ಡಾ.ಚೇತನ್ ಜೋಶಿ ಇರಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಜಗನ್ನಾಥ್ ಶೆಣೈ, ಕಿರುತೆರೆ ನಟ ಸುನೀಲ್ ಪುರಾಣಿಕ್, ರಂಗನಾಥ್, ಡಾ.ಡಿ.ವಿ‌. ಪ್ರಹ್ಲಾದರಾವ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: