ಮೈಸೂರು

ವೃತ್ತ ನಿರೀಕ್ಷಕ ಮನೋಜ್ ಕುಮಾರ್ ಗೆ ಬೀಳ್ಕೊಡುಗೆ

ಮೈಸೂರು,ಅ.25:- ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಮೂರೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿ ಚಾಮರಾಜನಗರ ಜಿಲ್ಲೆ ರಾಮಾಪುರ ತಾಲೂಕಿನ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ವೃತ್ತ ನಿರೀಕ್ಷಕ ಮನೋಜ್ ಕುಮಾರ್ ಅವರನ್ನು ಪೊಲೀಸ್ ಠಾಣಾ ಸಿಬ್ಬಂದಿಗಳು ಆತ್ಮೀಯವಾಗಿ ಬೀಳ್ಕೊಟ್ಟರು.

ಸನ್ಮಾನ ಸ್ವೀಕರಿಸಿದ ಸಿಪಿಐ ಮನೋಜ್‍ಕುಮಾರ್ ಮಾತನಾಡಿ, ತಿ.ನರಸೀಪುರ ವೃತ್ತಕ್ಕೆ ತಿ.ನರಸೀಪುರ ಪಟ್ಟಣ ಪೊಲೀಸ್ ಠಾಣೆ ಸೇರಿದಂತೆ ಬನ್ನೂರು, ತಲಕಾಡು ಪೊಲೀಸ್ ಠಾಣೆಗಳು ಸೇರಲಿದ್ದು, ಅಲ್ಲಿನ ಪಿಎಸ್‍ಐಗಳು ಹಾಗೂ ಸಿಬ್ಬಂದಿಗಳ ಸಹಕಾರದಿಂದಾಗಿ ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ ನಾನು ಯಾವುದೇ ಕಪ್ಪುಚುಕ್ಕೆ ಇಲ್ಲದೇ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತೆಂದು ಸ್ಮರಿಸಿದರು.

ಪಿಎಸ್‍ಐಗಳಾದ ರವಿಶಂಕರ್, ಎನ್.ಆನಂದ್, ನಂದೀಶ್‍ಕುಮಾರ್, ಅಜರುದ್ದೀನ್, ಎಎಸ್‍ಐ ರಾಜೇಂದ್ರ, ಮೂರ್ತಿ, ಸಿದ್ದಯ್ಯ, ದಪೇದಾರ್ ನಂಜೇಗೌಡ, ಪೋಲಿಸ್ ಸಿಬ್ಬಂದಿಗಳಾದ ಚರಣ್, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್ಎಚ್)

Leave a Reply

comments

Related Articles

error: