ಮೈಸೂರು

ಹಲವರ ಜೀವನ ಸುಧಾರಣೆಗೆ ವಿಷ್ಣು ಚಿತ್ರ ಪ್ರೇರಣೆ: ಕೆ.ಆರ್.ಮೋಹನ್ ಕುಮಾರ್

ಸಾಹಸಿಂಹ ಡಾ. ವಿಷ್ಣುವರ್ಧನ  ರವರ 7ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಕರುಣಾಮಯಿ ವಿಷ್ಣು ಅಭಿಮಾನಿಗಳ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗವಿರುವ ವಿಷ್ಣು ಉದ್ಯಾನವನದಲ್ಲಿ ಸಿಂಹದ ನೆನಪು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಷ್ಣು ಉದ್ಯಾನವನದಲ್ಲಿ ಶುಕ್ರವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿಷ್ಣುವರ್ಧನರ ಭಾವಚಿತ್ರಕ್ಕೆ ಮೂಡ ಮಾಜಿ ಅಧ್ಯಕ್ಷ ಕೆ.ಆರ್ ಮೋಹನ್ ಕುಮಾರ್  ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಹೊಸಮುಖದ ಕಲಾವಿದರಿಗೆ ಸ್ಫೂರ್ತಿಯಾಗಿದ್ದರು. ಕಾರ್ಮಿಕನಿಂದ ಮಾಲೀಕನವರೆಗೂ ಎಲ್ಲ ತರಹದ ಪಾತ್ರಗಳಲ್ಲಿ ನಟಿಸಿ ಸಮಾಜಕ್ಕೆ ಸಂದೇಶ ಸಾರುವ ಮೂಲಕ ಜೀವನವನ್ನು ರೂಪಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಅವರು ಮೂಲತಃ ಮೈಸೂರಿನವರಾಗಿದ್ದರೂ ಕೂಡ ನಟಿಸಿರುವ ಬಹುತೇಕ ಚಿತ್ರಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿತ್ತು ಎಂದರೆ ಮೈಸೂರಿನ ಮೇಲಿರುವ ಅವರ ಪ್ರೀತಿಯೇ ಕಾರಣ ಎಂದರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಷ್ಣು ಅಭಿಮಾನಿಗಳು ಪ್ರತಿಮೆಯನ್ನು ನಿರ್ಮಿಸಲು ಆಗ್ರಹಿಸುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಸಮಸ್ಯೆಯನ್ನು ಬಗೆಹರಿಸಿ ಅರಮನೆಯ ಮುಂಭಾಗವಿರುವ ವಿಷ್ಣು ಉದ್ಯಾನವನದಲ್ಲಿ ಪ್ರತಿಮೆ ನಿರ್ಮಿಸಲು ಮುಂದಾಗಬೇಕು. ಇಲ್ಲವಾದಲ್ಲಿ ವಿಷ್ಣು ಅಭಿಮಾನಿಗಳ ಬಳಗದ ವತಿಯಿಂದ ಲಕ್ಷಾಂತರ ಅಭಿಮಾನಿಗಳ ನೇತೃತ್ವದಲ್ಲಿ ಪ್ರತಿಮೆ ನಿರ್ಮಿಸಲು ಮುಂದಾಗುತ್ತೇವೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಕೆ.ರಘುರಾಂ ಮಾತನಾಡಿ ವಿಷ್ಣುವರ್ಧನ್ ನಟಿಸಿರುವ ಚಿತ್ರಗಳನ್ನು ಕುಟುಂಬ ಸಮೇತರಾಗಿ  ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸುತ್ತಿದ್ದವು ಎಂದರಲ್ಲದೇ ಇಂದಿನ ಚಿತ್ರಗಳಿಗೆ ವಿಷ್ಣು ಅಭಿನಯದ ಚಿತ್ರಗಳು ಮಾದರಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯ ಮಾವಿ ರಾಂ ಪ್ರಸಾದ್, ಎಂ.ಡಿ ಪಾರ್ಥಸಾರಥಿ, ಜೋಗಿ ಮಂಜು, ವಿಕ್ರಂ, ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕರುಣಾಮಯಿ ಅಭಿಮಾನಿಗಳ ಬಳಗದ ಅಧ್ಯಕ್ಷ ಎಸ್.ಎನ್ ರಾಜೇಶ್, ಕಡಕೊಳ ಜಗದೀಶ್, ಅಪೂರ್ವ ಸುರೇಶ್,  ಮಂಜುನಾಥ್, ಬಸವರಾಜು, ಲಕ್ಷ್ಮಣ್ ಮಹದೇವ್, ರವಿ ಆದಿಗಣೇಶ್ ವಾಸು ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: