ಸುದ್ದಿ ಸಂಕ್ಷಿಪ್ತ

ಅ.28ರಂದು ಭರತನಾಟ್ಯ ಸ್ಪರ್ಧೆ ‘ಬಹುಮಾನ’ ವಿತರಣೆ

ಮೈಸೂರು,ಅ.25 : ಸರಸ್ವತಿಪುರಂನ ಭಾರತೀಯ ನೃತ್ಯಕಲಾ ಪರಿಷತ್ ವತಿಯಿಂದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಅ.28ರ ಬೆಳಗ್ಗೆ 9 ಗಂಟೆಗೆ ನಡೆಯಲಿದೆ, ಸಂಜೆ 5ಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಭಾರತೀಯ ನೃತ್ಯ ಕಲಾ ಪರಿಷತ್ ವತಿಯಿಂದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ 2018ರ ಬಹುಮಾನ ವಿತರಣಾ ಸಮಾರಂಭದಲ್ಲಿ ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರದ ನಿರ್ದೇಶಕಿ ಡಾ.ವಸುಂಧರಾ ದೊರೆಸ್ವಾಮಿ ಅಧ್ಯಕ್ಷತೆ. ಅನನ್ಯ ಕಲಾನಿಕೇತನ ನಿರ್ದೇಶಕಿ ವಿದುಷಿ ಕೆ.ಬೃಂದಾ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಪಿ.ವಾಸು, ಉದ್ಯಮಿ ಆರ್.ಗುರು ಹಾಜರಿರಲಿದ್ದಾರೆ. ನಂತರ ಭರತನಾಟ್ಯ ಪ್ರದರ್ಶನವಿರಲಿದೆ. (ಕೆ.ಎಂ.ಆರ್)

Leave a Reply

comments

Related Articles

error: