ಪ್ರಮುಖ ಸುದ್ದಿ

ಪಾಲಿಬೆಟ್ಟ ಗ್ರಾ.ಪಂ.ಗೆ ಸಂಸದೀಯ ಸ್ಥಾಯಿ ಸಮಿತಿ ಭೇಟಿ

ರಾಜ್ಯ(ಮಡಿಕೇರಿ) ಅ.26 :- ಕೇಂದ್ರ ಲೋಕಸಭಾ ಸಚಿವಾಲಯದ ಗ್ರಾಮೀಣ ಅಭಿವೃದ್ಧಿ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ತಂಡವನ್ನು ಗುರುವಾರ ಜಿಲ್ಲೆಯ ಗಡಿಭಾಗ ಆನೆಚೌಕೂರಿನಲ್ಲಿ ಜಿಲ್ಲಾಡಳಿತ ವತಿಯಿಂದ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಜಿ.ಪಂ.ಸದಸರಾದ ಪಂಕಜ, ಜಿ.ಪಂ.ಉಪಕಾರ್ಯದರ್ಶಿ ಭೀಮ್‍ಸೇನ್, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ನಾಗಪ್ಪ, ಗ್ರಾ.ಪಂ. ಅಧ್ಯಕ್ಷರು ಇತರರು ಬರಮಾಡಿಕೊಂಡರು.

ನಂತರ ಪಾಲಿಬೆಟ್ಟ ಗ್ರಾ.ಪಂ.ಗೆ ಭೇಟಿ ನೀಡಿ ವಿದ್ಯುನ್ಮಾನ ಇ-ಸ್ವತ್ತು ತಂತ್ರಾಂಶ, ಇಲ್ಲಿನ ಸ್ವಚ್ಛತೆ, ಘನ ತ್ಯಾಜ್ಯ ವಿಲೇವಾರಿ ಘಟಕ, ಶುದ್ದ ಕುಡಿಯುವ ನೀರು ಘಟಕ ನಿರ್ವಹಣೆ, ಸ್ವಸಹಾಯ ಗುಂಪುಗಳ ಚಟುವಟಿಕೆ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಇಲ್ಲಿನ ಸ್ವಚ್ಛತೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಲಿಬೆಟ್ಟ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು, ಘನ ತ್ಯಾಜ್ಯ ವಿಲೇವಾರಿ ಮತ್ತಿತರ ಬಗ್ಗೆ ಮಾಹಿತಿ ಪಡೆದರು.

ಸಭೆಯಲ್ಲಿ ಮಾಹಿತಿ ಪಡೆದ ಸಮಿತಿಯು 13ನೇ ಹಣಕಾಸು ಯೋಜನೆ ಅನುಷ್ಠಾನ, ವಸತಿ ಯೋಜನೆ, ತೆರಿಗೆ ಸಂಗ್ರಹ, ಸ್ವಸಹಾಯ ಗುಂಪುಗಳು ಸ್ವ ಉದ್ಯೋಗ ಕೈಗೊಂಡು ಆರ್ಥಿಕ ಅಭಿವೃದ್ದಿ, ಸ್ವಸಹಾಯ ಗುಂಪುಗಳಿಗೆ ಸಹಾಯ ಧನ, ಮಾರುಕಟ್ಟೆ ವ್ಯವಸ್ಥೆ ಮತ್ತಿತರ ಬಗ್ಗೆ ಮಾಹಿತಿ ಪಡೆದರು.

ಸಂಸದೀಯ ಸಮಿತಿ ಅಧ್ಯಕ್ಷರಾದ ವೇಣುಗೋಪಾಲ್, ಸದಸ್ಯರಾದ ಅಭಿಜಿತ್ ಕುಮಾರ್, ನರಣ್‍ಬಾಯ್, ಶಾಂಷೀರ್ ಸಿಂಗ್, ಲಾಲ್ ಸಿಂಗ್, ಗೋಖರಾಜು ಗಂಗರಾಜು, ಎ.ಕೆ.ಸೇಲ್ವರಾಜ್, ಯಶ್ವಂತ್ ಸಿಂಗ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತೀಕ್, ಕೆಂಪರಾಜು, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಪ್ರಶಾಂತ್ ಕುಮಾರ್ ಮಿಶ್ರ, ಟಿ.ಜವರೇಗೌಡ, ಸುಂದರ ರಾಜ್, ಇಒ ಜಯಣ್ಣ, ಗ್ರಾ.ಪಂ. ಅಧ್ಯಕ್ಷರಾದ ಪುಲಿಯಂಡ ಬೋಪಣ್ಣ, ಸದಸ್ಯರು ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: