ಪ್ರಮುಖ ಸುದ್ದಿ

‘ವಂದೇ ಮಾತರಂ’ ಹಾಡುವ ಎಲ್ಲರೂ ದೇಶದ್ರೋಹಿಗಳು’ : ಪ್ರಕಾಶ್ ಯಶವಂತ್​ ಅಂಬೇಡ್ಕರ್

ದೇಶ(ಮಹಾರಾಷ್ಟ್ರ)ಅ.26:- ‘ವಂದೇ ಮಾತರಂ’ ಹಾಡುವ ಎಲ್ಲರೂ ದೇಶದ್ರೋಹಿಗಳು ಎಂದು ಭಾರತ ರತ್ನ ಡಾ. ಬಿ.ಆರ್.​ ಅಂಬೇಡ್ಕರ್​ ಅವರ ಮೊಮ್ಮಗ, ವಕೀಲ ಪ್ರಕಾಶ್ ಯಶವಂತ್​ ಅಂಬೇಡ್ಕರ್ ತಿಳಿಸಿದ್ದಾರೆ.

ಇಲ್ಲಿನ ಪಾರಭನಿ ಜಿಲ್ಲೆಯಲ್ಲಿ ಇತ್ತೀಚಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರಾಷ್ಟ್ರಗೀತೆ ಇರುವಾಗ ವಂದೇ ಮಾತರಂ ಹಾಡುವ ಅಗತ್ಯವಿಲ್ಲ. ಯಾರು ಈ ರಾಷ್ಟ್ರಗೀತೆಯನ್ನು ಹಾಡುತ್ತಾರೋ ಅವರು ರಾಷ್ಟ್ರಪ್ರೇಮಿಗಳು. ರಾಷ್ಟ್ರಗೀತೆಯನ್ನು ತಿರಸ್ಕರಿಸಿ ವಂದೇ ಮಾತರಂ ಹಾಡುತ್ತಾರೋ ಅಂತಹವರು ರಾಷ್ಟ್ರದ್ರೋಹಿಗಳು ಎಂದಿರುವ ಅವರು, ದೇಶಪ್ರೇಮದ ಬಗ್ಗೆ ಸರ್ಟಿಫಿಕೇಟ್​ ಕೊಡುವುದಕ್ಕೆ ಇವರು ಯಾರು? ಎಂದು ಸಂಘಪರಿವಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: