ಮೈಸೂರು

ಜಾಗತೀಕರಣಕ್ಕೂ ಸಾಂಸ್ಕೃತಿಕ ಪಲ್ಲಟಗಳಿಗೂ ಇರುವ ಸಂಬಂಧವನ್ನು ಉದಾರವಾಗಿಯೇ ನೋಡಬೇಕು : ಡಾ.ಮೊಗಳ್ಳಿ ಗಣೇಶ್

ಮೈಸೂರು,ಅ.26:- ಜಾಗತೀಕರಣಕ್ಕೂ ನಮ್ಮ ಈ ಕಾಲದ ಸಾಂಸ್ಕೃತಿಕ ಪಲ್ಲಟಗಳಿಗೂ ಇರುವ ಸಂಬಂಧವನ್ನು ನಾವು ಉದಾರವಾಗಿಯೇ ನೋಡಬೇಕಾಗುತ್ತದೆಯೇ ಹೊರತು ಅದನ್ನು ತುಂಬ ನೆಗೆಟಿವ್ ಆಗಿ ನೋಡಲು ಸಾಧ್ಯವಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಮೊಗಳ್ಳಿ ಗಣೇಶ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಜಾನಪದ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿಯ ವತಿಯಿಂದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾ ಪ್ರಯೋಗಾಲಯದಲ್ಲಿಂದು ಜಾನಪದ ಸರಣಿ ಉಪನ್ಯಾಸ 5ರಲ್ಲಿ ಜಾನಪದ ಮತ್ತು ಜಾಗತೀಕರಣ: ಸಾಂಸ್ಕೃತಿಕ ಪಲ್ಲಟಗಳು ಕುರಿತು ಉಪನ್ಯಾಸ ನೀಡಿದರು. ಅಖಂಡತೆ ಕಂಡುಕೊಳ್ಳುವ ನಿಟ್ಟಿನಲ್ಲಿ ನಾಗರಿಕತೆ ಬೆಳೆದು ಬಂದಿತು. ನಾಗರೀಕತೆ ಚಲನಶೀಲವಾದ್ದು. ಹೊಸದನ್ನು ಕಂಡುಕೊಂಡು ಜೀವನವನ್ನು ನಡೆಸುವಂತದ್ದು. ಅದನ್ನು ನಾವು ಆಧುನೀಕತೆ ಎಂತಲೂ ಕರೆಯುತ್ತೇವೆ. ಆಧುನಿಕತೆ, ನಾಗರೀಕತೆ, ಚಲನಶೀಲತೆಗಳು ಒಂದೇ ಪರಿಣಾಮ ಬೀರಲಾರದು. ಮೌಲ್ಯವ್ಯವಸ್ಥೆ ಸ್ಥೂಲವಾಗಿದ್ದರೂ ಚಲನಶೀಲತೆ ಬೇರೆಬೇರೆಯಾಗಿದೆ ಎಂದರು.

ಜಾಗತೀಕರಣಕ್ಕೂ ನಮ್ಮ ಈ ಕಾಲದ ಸಾಂಸ್ಕೃತಿಕ ಪಲ್ಲಟಗಳಿಗೂ ಇರುವ ಸಂಬಂಧವನ್ನು ನಾವು ಉದಾರವಾಗಿಯೇ ನೋಡಬೇಕಾಗುತ್ತದೆಯೇ ಹೊರತು ಅದನ್ನು ತುಂಬಾ ನೆಗೆಟಿವ್ ಆಗಿ ನೋಡಲಿಕ್ಕಾಗಲ್ಲ. ಜಾಗತೀಕರಣದಲ್ಲಿ ವಿಶ್ವಗ್ರಾಮ ಎಂಬುದನ್ನು ಬಳಸಿದವರೂ ಕೂಡ ಅಮೇರಿಕದವರೇ. ಬಡರಾಷ್ಟ್ರಗಳಲ್ಲಿರುವ ಸಂಪತ್ತನ್ನು ಅಭಿವೃದ್ಧಿಪಡಿಸಲು ಯಾವ ರೀತಿ ತಂತ್ರಜ್ಞಾನ ಅಳವಡಿಸಬೇಕು. ಆಧುನಿಕತೆಗೆ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟರು. ಸಮುದ್ರಮಾರ್ಗ, ಜಲಮಾರ್ಗ, ವಾಯುಮಾರ್ಗ ಕಂಡುಕೊಂಡಾಗ ಜಗತ್ತು ಹತ್ತಿರವಾಯಿತು. ನಾಗರೀಕತೆಯ ಸ್ವಭಾವವೇ ಮನುಷ್ಯ ಸಂಸ್ಕೃತಿಯ ಕುತೂಹಲ. ದುಂಡಾಗಿರುವ ಜಗತ್ತಿನಲ್ಲಿ ಯಾರ್ಯಾರು ಯಾವ್ಯಾವ ವ್ಯವಸ್ಥೆಯಲ್ಲಿ ಎಂಬ ಸ್ಥೂಲ ವಿಷಯ ಸಂಗ್ರಹಿಸಿದರು. ಜಗತ್ತಿನ ಜಾಗತೀಕರಣದ ಒಟ್ಟು ಪ್ರಕ್ರಿಯೆಯಲ್ಲಿ ದೇಸಿಯತೆಯನ್ನು ಕೂಡಿಕೊಳ್ಳುವ ಭಾಗವಾಗಿ ಆಯಾಯ ದೇಶಗಳ ಅನನ್ಯತೆಯನ್ನು ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಜಾಗತೀಕರಣದ ಪ್ರಕ್ರಿಯೆಯನ್ನು ಸಾಂಸ್ಕತಿಕ ಮತ್ತು ಜಾನಪದದ ಚೌಕಟ್ಟಿನಲ್ಲಿ ಹೇಗೆ ನೋಡಬೇಕು?ಅರ್ಥೈಸುವುದು ಹೇಗೆ? ಎನ್ನುವ ಚೌಕಟ್ಟಿನಲ್ಲಿ ಆಡಂಸ್ಮಿತ್ ಆ ಕಾಲಕ್ಕೆ ಅರ್ಥಶಾಸ್ತ್ರದ ವ್ಯಾಖ್ಯಾನ ಮಾಡಿದರು ಆಧುನಿಕತೆ ಮತ್ತು ತಂತ್ರಜ್ಞಾನ ಆ ಕಾಲದ ವ್ಯವಸ್ಥೆಯ ಬದಲಾವಣೆಗಳು ನನ್ನ ಬರವಣಿಗೆಗೆ ಹೊಂದಲ್ಲ. ಜಗತ್ತು ಬಹಳ ವೇಗವಾಗಿ ಆಧುನಿಕತೆ ಮತ್ತು ತಂತ್ರಜ್ಞಾನದ ಆವಿಷ್ಕಾರಗಳ ಮೂಲಕ ಹೊಸ ಆರ್ಥಿಕ ವ್ಯವಸ್ಥೆಯನ್ನು ಕಂಡುಕೊಂಡಾಗ ನನ್ನ ಹಳೆಯ ಪ್ರಮೇಯಗಳು ಪುಸ್ತಕದಂಗಡಿಯಲ್ಲಿ ಬಿಸಾಡಲ್ಪಟ್ಟಿರುತ್ತವೆ ಎಂದಿದ್ದರು ಎಂಬುದಾಗಿ ವ್ಯಾಖ್ಯಾನಿಸಿದರು.

ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್, ಜಾನಪದ ಅಧ್ಯಯನ ಮಂಡಳಿಯ ಅಧ್ಯಕ್ಷ ಡಾ.ಎಂ.ನಂಜಯ್ಯ ಹೊಂಗನೂರು, ಕೈಲಾಶ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: