ಲೈಫ್ & ಸ್ಟೈಲ್

ಮೂತ್ರಪಿಂಡಕ್ಕೆ ಹಾನಿಯುಂಟುಮಾಡಬಹುದಾದ ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆ ಹೆಚ್ಚಿಸಬಹುದು ಅಪಾಯ

ಮಧುಮೇಹ ಜೊತೆಗೆ ಹೃದ್ರೋಗಗಳು ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆ ಎಂದೂ ಕರೆಯಲಾಗುವ ಬೆನಿಗ್ನ್ ಪ್ರೊಸ್ಟಾಟಿಕ್ ಹೈಪರ್ಪ್ಲಾಸಿಯಾ (ಬಿಪಿಹೆಚ್)ದ ಅಪಾಯವನ್ನು ಹೆಚ್ಚಿಸುತ್ತದೆ, ಎಂದು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಸಲಹಾ ಮೂತ್ರಪಿಂಡಶಾಸ್ತ್ರಜ್ಞ ಡಾ. ಟಿ ಪಿ ದಿನೇಶ್ ಕುಮಾರ್ ಹೇಳಿದ್ದಾರೆ.

“ಪುರುಷರಿಗೆ ವಯಸ್ಸಾದಂತೆ ಈ ರೋಗ ಸಹಜ. 60 ವರ್ಷ ವಯಸ್ಸಿನ ವೇಳೆಗೆ ಹೆಚ್ಚುಕಡಿಮೆ ಶೇಕಡಾ 50 ರಷ್ಟು ಪುರುಷರು ಬಿಪಿಹೆಚ್ ನ ಲಕ್ಷಣಗಳನ್ನು ಮತ್ತು 85 ವರ್ಷದ ವೇಳೆಗೆ ಹೆಚ್ಚಾಗಿ ಶೇಕಡಾ 90 ರಷ್ಟು ಪುರುಷರು  ಸಾಮಾನ್ಯವಾಗಿ ಬಿಪಿಹೆಚ್ ನ ಸ್ಥಿತಿಯನ್ನು ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಪ್ರೊಸ್ಟೇಟ್ ಗ್ರಂಥಿ ಹಿಗ್ಗುವಿಕೆ ಸಾಮಾನ್ಯವಾಗಿ ಮೂತ್ರವಿಸರ್ಜನೆಯಲ್ಲಿ ಅನಾನುಕೂಲ ಉಂಟುಮಾಡುತ್ತವೆ. ಅಂದರೆ ಮೂತ್ರದ ಹರಿವಿನ್ನು ನಿರ್ಬಂಧಿಸುತ್ತದೆ. ಅಲ್ಲದೆ ಮೂತ್ರಕೋಶ, ಮೂತ್ರನಾಳ ಮತ್ತು ಮೂತ್ರಪಿಂಡದ ಅಸ್ವಸ್ಥತೆಗೆ ಕಾರಣವಾಗುತ್ತದೆ. ಆಗಾಗ್ಗೆ ಅಥವಾ ತುರ್ತಾಗಿ ಮೂತ್ರವಿಸರ್ಜನೆ ಮಾಡಬೇಕೆನಿಸುವುದು, ರಾತ್ರಿ ಮೂತ್ರವಿಸರ್ಜನೆಗೆ ಪದೇ ಪದೇ ಹೋಗಬೇಕೆನಿಸುವುದು,  ಮೂತ್ರವಿಸರ್ಜನೆಗೆ ತೊಡಕು, ಮೂತ್ರದ ಹರಿವು ನಿಧಾನವಾಗುವುದು ಮತ್ತು ನಿಂತು ಆರಂಭವಾಗುವ ಹರಿವು, ಮೂತ್ರವಿಸರ್ಜನೆಯ ಕೊನೆಯಲ್ಲಿ ತೊಟ್ಟಿಕ್ಕುವುದು, ಮೂತ್ರಕೋಶವನ್ನು ಸಂಪೂರ್ಣವಾಗಿ ಖಾಲಿಯಾಗಿಸಲು ಸಾಧ್ಯವಾಗದಿರುವುದು, ಮೂತ್ರದಲ್ಲಿ ರಕ್ತ ಇವುಗಳು ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆಗೆ ಸಂಬಂಧಿಸಿದ ನಿರ್ದಿಷ್ಟ ಲಕ್ಷಣಗಳು. ಪ್ರಾಸ್ಟೇಟ್ ಹಿಗ್ಗುವಿಕೆಗೆ ಅಪಾಯಕಾರಿಯಾಗಬಹುದಾದ ಅಂಶಗಳೆಂದರೆ ವಯಸ್ಸಾಗುವಿಕೆ- ತಂದೆ ಅಥವಾ ಸಹೋದರರಂತಹ ರಕ್ತ ಸಂಬಂಧಿಗಳಲ್ಲಿ ಪ್ರಾಸ್ಟೇಟ್ ಸಂಬಂಧಿತ ಸಮಸ್ಯೆಯಿದ್ದರೆ ನಿಮಗೂ ಅಪಾಯ ಬರುವ ಸಾಧ್ಯತೆ ಹೆಚ್ಚು,” ಎನ್ನುತ್ತಾರೆ ದಿನೇಶ್ ಕುಮಾರ್.

ನಿರ್ಲಕ್ಷ್ಯಿಸಿದರೆ ಆಗಬಹುದಾದ ತೊಂದರೆಗಳು

“ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆಯನ್ನು ನಿರ್ಲಕ್ಷ್ಯಿಸಿದರೆ ನಿಮಲ್ಲಿ ಬೆಳೆಯಬಹುದಾದ ತೊಂದರೆಗಳೆಂದರೆ ಒಮ್ಮೆಲೆ ಮೂತ್ರವಿಸರ್ಜನೆ ಸಾಧ್ಯವಾಗದಿರುವುದು ಅಥವಾ ಮೂತ್ರವಿಸರ್ಜನೆಗೆ ತೊಡಕಾಗುವುದು, ಮೂತ್ರನಾಳದ ಸೋಂಕು ಮತ್ತು ಅದರಿಂದಾಗಬಹುದಾದ ನೋವು, ಮೂತ್ರವಿಸರ್ಜನೆಯ ವೇಳೆ ಮರುಕಳಿಸುವ ಅನುಭವ. ಮೂತ್ರದ ಉಳಿಯುವಿಕೆ ಕ್ಯಾಲ್ಸಿಯಂ ಅಥವಾ ಮ್ಯಾಗ್ನೇಶಿಯಮ್ ಲವಣಗಳಂತಹ ಖನಿಜಾಂಶಗಳ ಘನೀಕರಣ ಮತ್ತು ಮೂತ್ರಕೋಶದಲ್ಲಿ ಕಲ್ಲುಗಳ ರಚನೆಗೆ ಕಾರಣವಾಗಬಹುದು. ಸಂಪೂರ್ಣವಾಗಿ ಖಾಲಿಯಾಗದ ಮೂತ್ರಕೋಶ ಹಿಗ್ಗಬಹುದು ಮತ್ತು ಸಮಯಾನಂತರ ದುರ್ಬಲಗೊಂಡು ಮೂತ್ರಕೋಶದ ಹಾನಿಗೆ ಕಾರಣವಾಗಬಹುದು. ಮೂತ್ರದ ಉಳಿಯುವಿಕೆಯಿಂದ ಮೂತ್ರಕೋಶದಲ್ಲಿನ ಒತ್ತಡವು ಮೂತ್ರಪಿಂಡಗಳಿಗೆ ಹಾನಿಯುಂಟುಮಾಡಬಹುದು. ಪ್ರಾಸ್ಟೇಟ್ನ ಗಾತ್ರ ಈ ಲಕ್ಷಣಗಳ ಗಂಭೀರತೆಯನ್ನು ನಿರ್ಧರಿಸಬೇಕೆಂದೇನಿಲ್ಲ. ಸಣ್ಣಪ್ರಮಾಣದ ಮತ್ತು ಮಧ್ಯಮ ಲಕ್ಷಣಗಳಿಗೆ ಔಷಧಿಯೇ ಅತ್ಯಂತ ಸಾಮಾನ್ಯ ಚಿಕಿತ್ಸೆಯಾಗಿದೆ.

ನಿಮ್ಮ ರೋಗ ಲಕ್ಷಣಗಳು ಸಾಮಾನ್ಯ ಮತ್ತು ಗಂಭೀರವಾಗಿದ್ದರೆ,  ಕನಿಷ್ಠ ಆಕ್ರಮಣಶೀಲ ಚಿಕಿತ್ಸೆಯನ್ನು ಸೂಚಿಸಲಾಗುತ್ತದೆ. ಹಿಗ್ಗಿಕೊಂಡ ಮೂತ್ರಕೋಶಕ್ಕೆ, ಹಾಲ್ಮಿಯಮ್‍ ಲೇಸರ್‍ ಪ್ರಾಸ್ಟೇಟ್‍ ಶಸ್ತ್ರಚಿಕಿತ್ಸೆ ಒಂದು ಆಕ್ರಮಣಶೀಲ ಚಿಕಿತ್ಸೆಯಾಗಿದೆ. ಹಾಲೆಪ್ನ ಪ್ರಕ್ರಿಯೆಯಲ್ಲಿ ಮೂತ್ರದ ಹರಿವನ್ನು ತಡೆಯುವ ಅಂಗಾಂಶವನ್ನು ತೆಗೆದುಹಾಕಲು ಲೇಸರ್ ನ್ನು ಬಳಸಲಾಗುತ್ತದೆ. ಇದು ಮೂತ್ರದ ಹರಿವನ್ನು ತಡೆಯುವ ಪ್ರಾಸ್ಟೇಟ್ನ ಒಂದು ಸಂಪೂರ್ಣ ಭಾಗವನ್ನು ನಾಶಮಾಡುತ್ತದೆ. ಈ ಚಿಕಿತ್ಸೆ ಹಿಗ್ಗಿಕೊಂಡ ಪ್ರಾಸ್ಟೇಟ್ ಇರುವ ಪುರುಷರಿಗೆ ಧೀರ್ಘಕಾಲಿಕ ಪರಿಹಾರವನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಹಾಲೆಪ್ ಶೀಘ್ರ ಗುಣಮುಖ ಮತ್ತು ಲಕ್ಷಣಗಳಿಂದ ಮುಕ್ತಿ ಒದಗಿಸುತ್ತದೆ.

ಟರ್ಪ್ (TURP)ಗೆ ಹೋಲಿಸಿದರೆ ಹಾಲೆಪ್ನಶಲ್ಲಿ ಕೆಲವು ಲಾಭಗಳಿವೆ, ಅವುಗಳೆಂದರೆ, ಸಾಮಾನ್ಯವಾಗಿ ರಕ್ತಸ್ರಾವದ ಪ್ರಮಾಣ ಹಾಲೆಪ್ನತಲ್ಲಿ ಅಲ್ಪ, ಕಡಿಮೆ ಅವಧಿಯ ಆಸ್ಪತ್ರೆ ವಾಸ, ಟರ್ಪ್ ಗೆ ಹೋಲಿಸಿದರೆ ಬೇಗನೆ ಅಂದರೆ ಕೇವಲ ಒಂದೆರಡು ದಿನದಲ್ಲಿ ಚೇತರಿಸಿಕೊಳ್ಳಬಹುದು. ಪುನರಾವರ್ತನೆಯ ಸಾಧ್ಯತೆ ಮತ್ತು ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಅನಿವಾರ್ಯತೆ ತುಂಬಾ ಕಡಿಮೆ. ಆಸ್ಪಿರಿನ್ನಂನತಹ ರಕ್ತದ ಸೋಂಕುಗಳಿರುವ ರೋಗಿಗಳಿಗೆ ಸುರಕ್ಷಿತ, ವಾರ್ಫರಿನ್ ನ್ನು  ಸುರಕ್ಷಿತವಾಗಿ, ಅತ್ಯಂತ ಕಡಿಮೆ ರಕ್ತಸ್ರಾವವಾಗುವಂತೆ ಶಸ್ತ್ರಚಿಕಿತ್ಸೆ ನಡೆಸಬಹುದು ಮತ್ತು ಹೃದಯ ಸಂಬಂಧಿತ ರೋಗಗಳಿರುವ ವಯಸ್ಸಾದ ರೋಗಿಗಳು, ನಿಯಂತ್ರಕಗಳ ಆಧಾರದಲ್ಲಿರುವ ರೋಗಿಗಳು, ತುಂಬಾ ದಡೂತಿ, ಅಸ್ತಮಾ ಪೀಡಿತರು, ಸಿಒಪಿಡಿ, ಮಧುಮೇಹ, ಎಲೆಕ್ಟ್ರೋಲೈಟ್‍ ಅಸಮತೋಲನಕ್ಕೆ ಒಳಗಾಗುವವರು ಸುರಕ್ಷಿತವಾಗಿ ಹಾಲೆಪ್ ಗೆ ಒಳಗಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆ ಮೈಸೂರು ಫರಾಝ್ ಮೊಹಮ್ಮದ್ ಇಸ್ಮಾಯಿಲ್ +91 8884655366, ಕೆ2 ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಉದಯ್ ಕುಮಾರ್ /ಲಾವಣ್ಯ ವೆಂಕಟೇಶ್ +918123440963/+919902242957 [email protected]  [email protected] ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: