ಕ್ರೀಡೆ

ವಿಶ್ವ ಮಹಿಳಾ ಕುಸ್ತಿ ಚಾಂಪಿಯನ್ ಶಿಪ್: ಕಂಚು ಜಯಿಸಿದ ಪೂಜಾ ಧಾಂಡಾ

ಬುಡಾಪೆಸ್ಟ್(ಹಂಗೇರಿ),.26-ವಿಶ್ವ ಮಹಿಳಾ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಪೂಜಾ ಧಾಂಡಾ ಕಂಚು ಜಯಿಸಿದ್ದಾರೆ. ಆ ಮೂಲಕ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚು ಜಯಿಸಿದ ಭಾರತದ ನಾಲ್ಕನೇ ಮಹಿಳಾ ಕುಸ್ತಿಪಟು ಎನಿಸಿಕೊಂಡಿರುವುದಲ್ಲದೆ, ಆರು ವರ್ಷಗಳ ಬಳಿಕ ಸಾಧನೆ ಮಾಡಿದ ಕುಸ್ತಿತಾರೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ಪೂಜಾ ಧಾಂಡಾ 2017 ಯುರೋಪಿಯನ್ ಚಾಂಪಿಯನ್ ಗ್ರೆಸ್ ಜಾಕಬ್ ಬುಲ್ಲೆನ್ರನ್ನು 10-7 ಅಂತರದಿಂದ ಸೋಲಿಸುವುದರೊಂದಿಗೆ ಕಂಚು ಜಯಿಸಿದ್ದಾರೆ.

ಪೂಜಾ 57 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ವರ್ಷ ಎರಡನೇ ಪ್ರತಿಷ್ಠಿತ ಪದಕ ಜಯಿಸಿದರು. ಆಸ್ಟ್ರೇಲಿಯದಲ್ಲಿ ನಡೆದಿದ್ದ ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪೂಜಾ ಬೆಳ್ಳಿ ಪದಕ ಜಯಿಸಿದ್ದರು.

ಪೂಜಾಗಿಂತ ಮೊದಲು ಅಲ್ಕಾ ಥೋಮರ್(2006), ಗೀತಾ(2012) ಹಾಗೂ ಬಬಿತಾ ಫೋಗಟ್(2012)ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚು ತನ್ನದಾಗಿಸಿಕೊಂಡಿದ್ದಾರೆ. ಈಗ ನಡೆಯುತ್ತಿರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಲಭಿಸಿರುವ 2ನೇ ಪದಕ ಇದಾಗಿದೆ. ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಬೆಳ್ಳಿ ಪದಕ ಜಯಿಸಿದ್ದರು. (ಎಂ.ಎನ್)

Leave a Reply

comments

Related Articles

error: