ಮೈಸೂರು

ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ಕನ್ನಡ ಪದಗಳನ್ನು ಪರಿಶೀಲಿಸುವ ಜವಾಬ್ದಾರಿ ಹೊತ್ತ ಅಧಿಕಾರಿಯನ್ನು ನೇಮಿಸಬೇಕೆಂದು ಮನವಿ ಸಲ್ಲಿಸಿದ ಅರವಿಂದ್ ಶರ್ಮ

ಮೈಸೂರು,ಅ.26:- ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ಕನ್ನಡ ಪದಗಳನ್ನು ಪರಿಶೀಲಿಸುವ ಜವಾಬ್ದಾರಿ ಹೊತ್ತ ಅಧಿಕಾರಿಯನ್ನು ನೇಮಿಸಬೇಕೆಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದೆ.

2018 ರ ನವೆಂಬರ್ 1 ರಿಂದ ಸರ್ಕಾರದ ಎಲ್ಲಾ ಕಡತಗಳು ಕನ್ನಡದಲ್ಲಿದ್ದರೆ ಮಾತ್ರ ಅದಕ್ಕೆ ಸಹಿ ಹಾಕುವುದಾಗಿ ಹೇಳಿ ಆದೇಶ ಹೊರಡಿಸಿರುವುದು ಸಮಸ್ತ ಕನ್ನಡಿಗರಿಗೆ ಸಂತೋಷ ತಂದ ವಿಷಯ. ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ  ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಶರ್ಮ ತಿಳಿಸಿದ್ದಾರೆ. 2018ರ ನಾಡ ಹಬ್ಬ ದಸರಾದಲ್ಲಿ  ಸಾರ್ವಜನಿಕವಾಗಿ ಅಳವಡಿಸುವ ಮಾರ್ಗದರ್ಶಿ ಫಲಕಗಳು ಹಾಗೂ ಜಾಹಿರಾತುಗಳಲ್ಲಿ  ಕನ್ನಡ ಭಾಷೆಯನ್ನು ಸಂಬಂಧ ಪಟ್ಟ ಇಲಾಖೆಗಳು ತಪ್ಪಾಗಿ ಮುದ್ರಿಸಿ ಸಾರ್ವಜನಿಕವಾಗಿ ಹಾಕಿರುವುದು ಕಂಡು ಬಂದು ಅಕ್ರೋಶಕ್ಕೆ ಕಾರಣವಾಗಿದೆ ಉದಾ ಹರಣೆಗೆ  ದಸರಾ ಹಬ್ಬದ ಹಾರ್ದಿಕ ಶುಭಾಷಯಗಳು ಎಂದು ಬರೆಯಲು ದಸರಾ ಹಬ್ಬದ ಅರ್ಥಿಕ ಶುಭಾಷಯಗಳು ಎಂದು ಮುದ್ರಿಸಿ ಹಾಕಿರುವುದು ನಾಲ್ಕು ಚಕ್ರದ ವಾಹನ ನಿಲುಗಡೆ ಎಂಬುದರ ಬದಲಾಗಿ ನಾಲ್ಕ ವಾಹನದ ನಿಲುಗಡೆ ಎಂದು ಮುದ್ರಣವಾಗಿರುವುದು ಹಾಗೂ ಹಲವಾರು ಸರ್ಕಾರಿ ಜಾಹಿರಾತು ಫಲಕಗಳಲ್ಲಿ ಕನ್ನಡ ಪದ ಬಳಕೆಯಲ್ಲಿ ತಪ್ಪು ತಪ್ಪಾಗಿ ಮುದ್ರಣ ಮಾಡಿ 2018 ರ ವಿಶ್ವವಿಖ್ಯಾತಿ ದಸರಾದಲ್ಲಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಹಾಗೂ ಕನ್ನಡಿಗರ ಮಾನ ಹರಾಜಾಗಿದೆ.

ಬಹು ಮುಖ್ಯವಾಗಿ ಸರ್ಕಾರದ ಯಾವುದೇ ಸಾರ್ವಜನಿಕ ಜಾಹೀರಾತುಗಳಲ್ಲಿ ಕನ್ನಡ ಅಂಕಿ ಬಳಸದೇ ಮುಂದಿನ ಪೀಳಿಗೆಗೆ ಅದರ ಪರಿಚಯವಿಲ್ಲದ ಹಾಗೆ ಆಗುತ್ತಿದೆ ಮುಖ್ಯಮಂತ್ರಿಗಳು  ಸರ್ಕಾರಿ ಜಾಹೀರಾತುಗಳನ್ನು ಕನ್ನಡದಲ್ಲೇ ಕೊಡಬೇಕು ಅದರಲ್ಲಿ ಕಡ್ಡಾಯವಾಗಿ ಕನ್ನಡ ಅಂಕಿಗಳನ್ನೇ ಬಳಸಿ ಸರ್ಕಾರದ ಎಲ್ಲಾ ಜಾಹೀರಾತು ಫಲಕ ಹಾಗೂ ಕಡತಗಳಲ್ಲಿ ಇರಬೇಕು ಎಂದು ಅದೇಶ ಹೊರಡಿಸಬೇಕು. ಕನ್ನಡ ಅಂಕಿಗಳನ್ನೊಳಗೊಂಡ ಕನ್ನಡ ಪದಗಳು  ತಪ್ಪಾಗಿ ಮುದ್ರಿಸುವುದನ್ನು ತಪ್ಪಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ಕನ್ನಡ ಅಂಕಿಗಳನ್ನೊಳಗೊಂಡ ಕನ್ನಡ ಭಾಷೆಯ ಪದಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ಹೊತ್ತ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಆ ಇಲಾಖೆ ಕನ್ನಡ ಅಂಕಿಗಳನ್ನೊಳಗೊಂಡ ಕನ್ನಡ ಪದಗಳ ಅಧಿಕೃತ ಪರಿಶೀಲನೆ ಮಾಡಿ ಅನುಮೋದನೆ ಕೊಟ್ಟ  ನಂತರವಷ್ಟೇ ಸರ್ಕಾರದ ಜಾಹೀರಾತು ಹಾಗೂ ಮಾರ್ಗದರ್ಶಿ ಫಲಕಗಳು ಆ ಜಿಲ್ಲೆಗಳಲ್ಲಿ ಸಾರ್ವಜನಿಕವಾಗಿ ಹಾಕುವ ವ್ಯವಸ್ಥೆಯನ್ನು ಮಾಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು. ಹೀಗೆ ಮಾಡಿದಾಗ ಮಾತ್ರವೇ ಕನ್ನಡ ಉಳಿಸಿ ಬೆಳಸುವಲ್ಲಿ  ಕನ್ನಡದ ಅಂಕಿಗಳು ಮುಂದಿನ ಪೀಳಿಗೆ ಮರೆಯುತ್ತಿರುವುದನ್ನು ತಡೆಗಟ್ಟಲು ಸಹಕಾರಿಯಾಗುವುದು ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: