ಕ್ರೀಡೆ

ತಂಡದಿಂದ ಕೈ ಬಿಟ್ಟಿದ್ದಕ್ಕೆ ಕೇದರ್ ಜಾಧವ್ ಅಸಮಾಧಾನ

ನವದೆಹಲಿ,ಅ.26-ಭಾರತ ತಂಡದಲ್ಲಿ ಮತ್ತೆ ಅಪಸ್ವರ ಭುಗಿಲೆದ್ದಿದೆ. ಯಾವುದೇ ಸೂಚನೆಯಿಲ್ಲದೆ ತಮ್ಮನ್ನು ಟೆಸ್ಟ್ ತಂಡದಿಂದ ಕೈಬಿಟ್ಟಿರುವುದಕ್ಕೆ ಮುರಳಿ ವಿಜಯ್ ಹಾಗೂ ಕರುಣ್ ನಾಯರ್ ಕೆಲ ದಿನಗಳ ಹಿಂದಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಆಲ್ರೌಂಡರ್ ಕೇದರ್ ಜಾಧವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏಷ್ಯಾ ಕಪ್ ವೇಳೆಯಲ್ಲಿ ಜಾಧವ್ ಗಾಯಗೊಂಡಿದ್ದರು. ಇದೀಗ ಸಂಪೂರ್ಣ ದೈಹಿಕ ಸಾಮರ್ಥ್ಯ ಮರಳಿ ಪಡೆದರೂ ವೆಸ್ಟ್ಇಂಡೀಸ್ ವಿರುದ್ಧದ ಕೊನೆಯ ಮೂರು ಪಂದ್ಯಗಳಿಗೆ ತಮ್ಮನ್ನು ಪರಿಗಣಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಿಯೋದರ್ ಟ್ರೋಫಿಯಲ್ಲಿ ಭಾರತ ತಂಡದ ಪರ ಆಡುವಂತೆ ಜಾಧವ್ಗೆ ಸೂಚಿಸಲಾಗಿತ್ತು. ಅಲ್ಲದೆ 25 ಎಸೆತಗಳಲ್ಲಿ ಅಜೇಯ 41 ರನ್ ಸಹ ಗಳಿಸಿದ್ದರು. ನನಗೆ ಬಗ್ಗೆ ಅರಿವಿಲ್ಲ. ನೋಡೋಣ. ಮೊದಲು ನನಗೆ ತಿಳಿಸಬೇಕಿತ್ತು. ಏಕೆ ಕೈಬಿಟ್ಟಿದ್ದಾರೆ ಎಂಬುದರ ಬಗ್ಗೆ ತಿಳಿಯುವ ಕುತೂಹಲವಿದೆ. ಈಗಿನ ಯೋಜನೆ ಏನೆಂಬುದು ನನಗೆ ಗೊತ್ತಿಲ್ಲ. ನಾನು ತಂಡದಲ್ಲಿಲ್ಲ. ಬಹುಶಃ ನಾನು ರಣಜಿ ಟ್ರೋಫಿ ಆಡಲಿರುವೆನು ಎಂದು ಜಾಧವ್ ತಿಳಿಸಿದ್ದಾರೆ.

ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ನೇತೃತ್ವದ ಸಮಿತಿಯು ತಂಡವನ್ನು ಆರಿಸಿತ್ತು. ಆದರೆ ಸಂವಹನ ಕೊರತೆಯ ಬಗ್ಗೆ ಆಟಗಾರರು ಪದೇ ಪದೇ ದೂರು ನೀಡುತ್ತಿದ್ದಾರೆ. ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಸಾದ್, ಹೆಚ್ಚಿನ ದೇಶೀಯ ಪಂದ್ಯಗಳನ್ನು ಆಡಿದ ಬಳಿಕವಷ್ಟೇ ಜಾಧವ್ ಪುನರಾಗಮನವನ್ನು ಪರಿಗಣಿಸಲಾಗುವುದು ಎಂದಿದ್ದಾರೆ.

ಫಿಟ್ನೆಸ್ ಸಮಸ್ಯೆಯಿಂದಾಗಿಯೇ ಜಾಧವ್ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಇತಿಹಾಸವೇ ಇದನ್ನು ಹೇಳುತ್ತಿದೆ. ಫಿಟ್ ಆಗಿ ಬಂದರೂ ಮತ್ತೆ ದೈಹಿಕ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕಾಲವಕಾಶ ಇರುತ್ತದೆ. ಇದಕ್ಕಾಗಿ ಕಾಯಬೇಕಾಗುತ್ತದೆ ಎಂದರು.

ಮುರಳಿ ವಿಜಯ್ ಹಾಗೂ ಕರುಣ್ ನಾಯರ್ ಅಸಮಾಧಾನ ವ್ಯಕ್ತಪಡಿಸಿದ್ದಾಗ ಬಿಸಿಸಿಐ ಮೇಲ್ವಿಚಾರಣೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ನೇಮಿತ ಆಡಳಿತಗಾರರ ಸಮಿತಿಯು ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಜೊತೆಗೆ ವಿಸ್ತೃತವಾಗಿ ಚರ್ಚೆ ನಡೆಸಿತ್ತು. (ಎಂ.ಎನ್)

Leave a Reply

comments

Related Articles

error: