ಮೈಸೂರು

ದೇಶ ಪ್ರಬುದ್ಧತೆಯ ಕೊರತೆಯಿಂದ ನರಳುತ್ತಿದೆ: ಜ್ಞಾನ ಪ್ರಕಾಶ ಸ್ವಾಮೀಜಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪ.ಜಾ/ಪ.ಪಂ. ನೌಕರರ ಸಂಘ ಮತ್ತು ಪ.ಜಾ./ಪ.ಪಂ. ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ – ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಭಾವಚಿತ್ರ ಇರುವ 2017 ರ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶಿವಯೋಗಿ ಉರಿಲಿಂಗಿ ಪದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ಅವರು ಸಮಾನತೆ ಸೋದರತೆ ಭ‍್ರಾತೃತ್ವದ ಭಾರತದ ಕನಸು ಕಂಡರು. ಆದರೆ ಇಂದು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಭಾರತ ನಾಶವಾಗುತ್ತಿದೆ. ಪ್ರಬುದ್ಧತೆಯ ಕೊರತೆಯಿಂದ ನರಳುತ್ತಿದೆ. ಜಾತಿ ಮತ್ತು ಧರ್ಮ ದೇಶದ ದೊಡ್ಡ ಶತ್ರು. ಅವನ್ನು ಹೋಗಲಾಡಿಸಿ ಸಮಾನತೆಯ, ಜಾತ್ಯಾತೀತ ಮೌಲ್ಯಗಳುಳ್ಳ ದೇಶವನ್ನು ಕಟ್ಟಬೇಕು. ಅಸಲಿ ಪ್ರಜಾಪ್ರಭುತ್ವ ಮರೆಯಾಗಿ ನಕಲಿ ಪ್ರಜಾಪ್ರಭುತ್ವ ತಾಂಡವವಾಡುತ್ತಿದೆ. ನಾವೆಲ್ಲರೂ ಪ್ರಜಾಪ್ರಭುತ್ವದ ಮೂಲ ಬೇರುಗಳು. ಆದ್ದರಿಂದ ದೇಶವನ್ನು ಕಟ್ಟಿ ಬೆಳೆಸುವ ಮಹಾನ್ ಕಾರ್ಯವನ್ನು ಮಾಡಬೇಕಿದೆ ಎಂದು ಹೇಳಿದರು.

ಈ ಸಂದರ್ಭ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಮಹೇಶ್, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಮಮೂರ್ತಿ ಮತ್ತು ಕಲ್ಯಾಣ ಬಂತೇಜಿ ಸ್ವಾಮಿ ಉಪಸ್ಥಿತರಿದ್ದರು.

Leave a Reply

comments

Related Articles

error: