ಕರ್ನಾಟಕಪ್ರಮುಖ ಸುದ್ದಿ

ನಿರ್ಮಾಪಕರ ಹಿತರಕ್ಷಣೆಗಾಗಿ ‘ಪ್ರೊಡ್ಯೂಸರ್ ಪ್ರೊಟೆಕ್ಷನ್ ಕಮಿಟಿ’ ರಚಿಸಲು ನಿರ್ಧಾರ

ಬೆಂಗಳೂರು (ಅ.26): ಹಿರಿಯ ನಟ ಅಂಬರೀಶ್‍ ಅವರ ಸಂಧಾನ ಸಭೆ ವಿಫಲಗೊಂಡ ಹಿನ್ನಲೆ, #ಮೀಟೂ ಅಭಿಯಾನದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಎಚ್ಚೆತ್ತುಕೊಂಡಿದೆ.

#ಮೀಟೂ ಅಭಿಯಾನದಿಂದ ಮುಂದೆ ಇಂಥ ವಿವಾದಗಳನ್ನು ತಡೆಯಲು, ನಿರ್ಮಾಪಕರ ಹಿತರಕ್ಷಣೆ ಕಾಪಾಡಲು ‘ಪ್ರೊಡ್ಯೂಸರ್ ಪ್ರೊಟೆಕ್ಷನ್ ಕಮಿಟಿ’ ರಚಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಮೂರು ದಿನಗಳಲ್ಲಿ ‘ಪ್ರೊಡ್ಯೂಸರ್ ಪ್ರೊಟೆಕ್ಷನ್ ಕಮಿಟಿ’ ರೂಪುರೇಷೆ ಸಿದ್ಧತೆಗೊಳ್ಳಲಿದೆ ಎಂದು ಫಿಲ್ಮ್ ಚೇಂಬರ್ ಮೂಲಗಳು ತಿಳಿಸಿವೆ.

ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳನ್ನು ತಡೆಯಲು ‘ಫೈರ್’ (FIRE-Film Industry for Rights and Equity) ಸಂಸ್ಥೆ ರಚಿಸಲಾಗಿತ್ತು. ಆದ್ರೆ, ಪ್ರಿಯಾಂಕಾ ಉಪೇಂದ್ರ, ರೇಖಾ ರಾಣಿ, ವೀಣಾ ಸುಂದರ್, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವರು ‘ಫೈರ್’ ಸಂಸ್ಥೆಯಿಂದ ಹೊರಗೆ ಬಂದಿದ್ದಾರೆ. ಹೀಗಾಗಿ ‘ಫೈರ್’ ಸಂಸ್ಥೆಗೆ ಆರಂಭದಲ್ಲೇ ಹಿನ್ನಡೆ ಉಂಟಾಗಿದೆ.

ರೆಬೆಲ್ ಸ್ಟಾರ್ ಅಂಬರೀಶ್‍ ಅವರಿಗೆ ಮೊಟ್ಟ ಮೊದಲ ಬಾರಿಗೆ ಸೋಲು ಉಂಟಾಗಿದೆ. ಫಿಲ್ಮ್ ಚೇಂಬರ್ ನಲ್ಲಿ ನಿನ್ನೆ ಸಂಜೆ ನಡೆದ ಸಂಧಾನ ಸಭೆ ವಿಫಲಗೊಂಡಿದೆ. ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ನಡುವೆ ಒಮ್ಮತ ಮೂಡಲಿಲ್ಲ. ಹೀಗಾಗಿ, ರಾಜಿ ಮಾತುಕತೆ ಮುರಿದುಬಿದ್ದಿದೆ. #ಮೀಟೂ ಅಭಿಯಾನ ಕನ್ನಡ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಯಾವಾಗ ತಣ್ಣಗಾಗುವುದೋ ಕಾದುನೋಡಬೇಕು. (ಎನ್.ಬಿ)

Leave a Reply

comments

Related Articles

error: