ಮೈಸೂರು

ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಒತ್ತಾಯ

ಸರ್ಕಾರಿ / ಅನುದಾನಿತ ಪಿಯು ಉಪನ್ಯಾಸಕರ ವೇತನ ಬಿಡುಗಡೆ, ವೇತನ ತಾರತಮ್ಯ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘದ ರಾಜ್ಯಾಧ‍್ಯಕ್ಷ ಶಿವೇಗೌಡ ಶಿಕ್ಷಣ ಸಚಿವರಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕುಮಾರ್ ನಾಯಕ್ ಸಮಿತಿಯ ಶಿಫಾರಸಿನಂತೆ ರಾಜ್ಯ ಸರ್ಕಾರ ಪಿಯು ಉಪನ್ಯಾಸಕರಿಗೆ ಜನವರಿ 2017 ರಲ್ಲಿ ಹೆಚ್ಚುವರಿ ವೇತನ ನೀಡುವ ಬಗ್ಗೆ ಶಿಕ್ಷಣ ಸಚಿವರು  ಮುಖ್ಯಮಂತ್ರಿಗಳ ಮನವೊಲಿಸಬೇಕು. 2008 ರ ನಂತರ ನೇಮಕವಾದ ಪಿಯು ಉಪನ್ಯಾಸಕರಿಗೆ ವಿಶೇಷ ಭತ್ಯೆ ನೀಡಬೇಕು. 1984 ರಿಂದ 1991 ರ ವರೆಗೆ ಪಿಯು ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇರೆಗೆ ನೇಮಕಗೊಂಡಿರುವ ಉಪನ್ಯಾಸಕರ 7 ವರ್ಷಗಳ ಅವಧಿಯ ಸೇವೆಯನ್ನು ಪರಿಗಣಿಸಿ ನೀಡುತ್ತಿದ್ದ ಕಾಲ್ಪನಿಕ ಬಡ್ತಿಯನ್ನು ವಾಪಸ್ ಪಡೆಯಬೇಕು. ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಳೆದ 23 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವವರಿಗೆ ಪ್ರಾಂಶುಪಾಲರಾಗಿ ಪದೋನ್ನತಿ ನೀಡಬೇಕು. 2009 ರಲ್ಲಿ ಬಿ.ಇಡಿ. ಮಾಡಿಲ್ಲದವರಿಗೆ ಓದಲು ವೇತನ ಮತ್ತು ರಜೆ ಸಮೇತ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಲಕ್ಷ್ಮಣ್, ರವಿಶಂಕರ್, ಕುಮಾರ್ ಕೆ.ಟಿ ಹಾಜರಿದ್ದರು.

Leave a Reply

comments

Related Articles

error: