
ದೇಶ
ಕಲ್ಲಿದ್ದಲ್ಲು ಗಣಿ ಕುಸಿತ : ಲೆಕ್ಕ ಸಿಗದ ಕಾರ್ಮಿಕರ ಸಂಖ್ಯೆ
ಕಲ್ಲಿದ್ದಲು ಗಣಿ ಕುಸಿತದ ದುರ್ಘಟನೆಯೂ ಜಾರ್ಖಂಡ್ನ ರಾಂಚಿಯಲ್ಲಿ ಕಳೆದ ರಾತ್ರಿ ನಡೆದಿದ್ದು ಘಟನೆಯಲ್ಲಿ 40ಕ್ಕೂ ಹೆಚ್ಚು ವಾಹನಗಳು ಸೇರಿದಂತೆ 50 ಜನಕ್ಕೂ ಹೆಚ್ಚು ಕಾರ್ಮಿಕರು ಭೂ ಸಮಾಧಿಯಾಗಿದ್ದಾರೆ.
ಜಾರ್ಖಂಡ್ ನ ಗೊದ್ದಾ ಜಿಲ್ಲೆಯ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ ನ ಲಾಲ್ ಮಾಟಿಯಾ ಗಣಿಯ ಪ್ರವೇಶ ಕೇಂದ್ರದಲ್ಲಿ ಮಣ್ಣಿನ ರಾಶಿ ಕುಸಿದು ಈ ಅವಘಡ ಸಂಭವಿಸಿದ್ದು. ನೆಲದಿಂದ ಸುಮಾರು 200 ಅಡಿ ಆಳದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿತ್ತು. ಪಾಟ್ನಾದಿಂದ ಆಗಮಿಸಿದ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ ತಂಡ ರಕ್ಷಣಾ ಕಾರ್ಯಾಚರಣೆಯನ್ನು ಭರದಿಂದ ನಡೆಸಿದ್ದು ವಾತಾವರಣದಲ್ಲಿ ದಟ್ಟ ಮಂಜು ಕವಿದಿದ್ದು ರಕ್ಷಣಾ ಕಾರ್ಯಕ್ಕೆ ಹಿನ್ನೆಡೆಯುಂಟಾಗುತ್ತಿದೆ.
ಮುಖ್ಯಮಂತ್ರಿ ರಘುವೀರ್ ದಾಸ್ ಕಾರ್ಯಾಚರಣೆಯ ಸಮೀಪ್ಯವಹಿಸಿದ್ದಾರೆ. ಗಣಿಯ ಅವಶೇಷಗಳಡಿ ಎಷ್ಟು ವಾಹನಗಳು ಹಾಗೂ ಕಾರ್ಮಿಕರಿದ್ದಾರೆಂಬ ನಿಖರ ಅಂಕಿ ಅಂಶಗಳು ಸಿಕ್ಕಲ್ಲ.