ಪ್ರಮುಖ ಸುದ್ದಿ

ಸಿಬಿಐ ನಿರ್ದೇಶಕರಿಗೆ ಕಡ್ಡಾಯ ರಜೆ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ : ರಾಹುಲ್ ಗಾಂಧಿ ಬಂಧನ, ಬಿಡುಗಡೆ

ದೇಶ( ನವದೆಹಲಿ)ಅ.26:-  ಸಿಬಿಐ ನಿರ್ದೇಶಕ ಅಲೋಕ್​ ಕುಮಾರ್​ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವುದನ್ನು ವಿರೋಧಿಸಿ ದೆಹಲಿಯ ಸಿಬಿಐ ಮುಖ್ಯಕಚೇರಿಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ಇತರೆ ನಾಯಕರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.

ಶುಕ್ರವಾರ ಬೆಳಗ್ಗೆ ದೆಹಲಿಯ ಸಿಬಿಐ ಮುಖ್ಯ ಕಚೇರಿ ಮತ್ತು ದೇಶಾದ್ಯಂತ ಇರುವ ಸಿಬಿಐ ಕಚೇರಿಗಳ ಮುಂಭಾಗ ಕಾಂಗ್ರೆಸ್​ ನೇತೃತ್ವದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು. ರಾಹುಲ್​ ಗಾಂಧಿ ಅವರೊಂದಿಗೆ ಕಾಂಗ್ರೆಸ್​ ಹಿರಿಯ ನಾಯಕರಾದ ಅಶೋಕ್​ ಗೆಹ್ಲೋಟ್​, ಅಹಮದ್​ ಪಟೇಲ್​, ಮೋತಿಲಾಲ್​ ವೋರಾ, ವೀರಪ್ಪ ಮೋಯ್ಲಿ, ಆನಂದ್​ ಶರ್ಮಾ, ಹಾಗು ಮೈತ್ರಿ ಪಕ್ಷದ ಇತರರು ಭಾಗಿಯಾಗಿದ್ದರು. ಈ ಸಂದರ್ಭ ಅವರು ಸಿಬಿಐ, ಚುನಾವಣಾ ಆಯೋಗ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಪ್ರಧಾನಿ ಮೋದಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: