ಸುದ್ದಿ ಸಂಕ್ಷಿಪ್ತ
ಕೌನ್ಸಿಲಿಂಗ್
ಮೈಸೂರು,ಅ.26-ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ 2017-18ನೇ ಸಾಲಿನ ಕೋರಿಗೆ ವರ್ಗಾವಣೆಯನ್ನು ಅ.30 ರವರೆಗೆ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, (ಎನ್.ಟಿ.ಎಂ.ಎಸ್) ಇಲ್ಲಿ ಕೌನ್ಸಿಲಿಂಗ್ ನಡೆಯಲಿದೆ.
ಅ.27 ರಂದು ಬೆಳಿಗ್ಗೆ 9.30 ಕ್ಕೆ 701 ರಿಂದ 1200 ರವರೆಗೆ ಕೌನ್ಸಿಲಿಂಗ್ ನಡೆಯಲಿದೆ. ಅ.29 ರಂದು ಬೆಳಿಗ್ಗೆ 9.30 ಗಂಟೆಗೆ 1201 ರಿಂದ 1867 ಹಾಗೂ ಅ.30 ರಂದು ಬೆಳಿಗ್ಗೆ 9.30 ಗಂಟೆಗೆ 1 ರಿಂದ 3, 1 ರಿಂದ 85, 1 ರಿಂದ 77 ರವರೆಗೆ ಕೌನ್ಸಿಲಿಂಗ್ ನಡೆಯಲಿದೆ.
ಶಿಕ್ಷಕರು ತಮ್ಮ ಆದ್ಯತಾನುಸಾರ ಪೂರಕ ದಾಖಲೆಗಳೊಂದಿಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಂ.ಎನ್)