ಕರ್ನಾಟಕ

ನಮ್ಮಲ್ಲಿ ಸಾಫ್ಟ್ ಹಿಂದುತ್ವ, ಹಾರ್ಡ್‌ ಹಿಂದುತ್ವ ಅನ್ನೋ ಭೇದವಿಲ್ಲ: ಸಿದ್ದರಾಮಯ್ಯ

ಶಿವಮೊಗ್ಗ (ಅ.26): ಉಪಚುನಾವಣೆಯಲ್ಲಿ ಹಿಂದುತ್ವದ ವಿಚಾರದಲ್ಲಿ ಅಪಪ್ರಚಾರವನ್ನು ನಾವು ತಡೆದಿದ್ದು, ಬಿಜೆಪಿಯನ್ನು ಸೋಲಿಸಲು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಂದಾಗಿ ಕೆಲಸ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದರು. ನಾನೂ ಹಿಂದು, ಯಡಿಯೂರಪ್ಪನೂ ಹಿಂದು, ನಮ್ಮಿಬ್ಬರಲ್ಲಿ ಏನು ವ್ಯತ್ಯಾಸವಿದೆ ಎಂದರು.

ಕರಾವಳಿಯನ್ನು ಬಿಜೆಪಿಯವರು ಹಿಂದುತ್ವದ ಪ್ರಯೋಗಾಲಯ ಮಾಡಿಕೊಂಡಿದ್ದರು. ಅಪಪ್ರಚಾರ ಮಾಡಿದ ಕಾರಣ ನಮಗೆ ಹಿನ್ನಡೆಯಾಯಿತು. ಈಗ ನಾವು ಅಪಪ್ರಚಾರವನ್ನು ತಡೆದಿದ್ದೇವೆ. ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. (ಎನ್.ಬಿ)

Leave a Reply

comments

Related Articles

error: