Uncategorized

ಟಾಯ್ಲೆಟ್ ಇಲ್ಲವೆಂಬ ಕಾರಣಕ್ಕೆ ಗಂಡನ ಮನೆ ತೊರೆದ ಪತ್ನಿ

ಬೆಂಗಳೂರು (ಅ.26): ಯಾವುದಾವುದೋ ಕಾರಣಕ್ಕೆ ಗಂಡ-ಹೆಂಡತಿಯರು ಜಗಳವಾಡಿಕೊಂಡು ಬೇರಾಗುವುದನ್ನು ನೋಡಿದ್ದೇವೆ. ಆದರೆ ಗಂಡನನ್ನು ಬಿಟ್ಟು ಹೋಗುವುದನ್ನು ಕೇಳಿದ್ದೇವೆ. ಆದರೆ ಕಾರವಾರದಲ್ಲಿ ಮನೆಯಲ್ಲಿ ಟಾಯ್ಲೆಟ್ ಇಲ್ಲ ಎಂಬ ಕಾರಣಕ್ಕೆ ಹೆಂಡತಿ, ಗಂಡನನ್ನು ತೊರೆದು ಹೋಗಿದ್ದಾಳೆ.

ಬಯಲಿನಲ್ಲಿ ಶೌಚ ಮಾಡುವುದಕ್ಕೆ ಒಪ್ಪದ ಗೀತಾ ಪ್ರೇಮಾನಂದ ತನ್ನ ಮಗುವಿನೊಂದಿಗೆ ಗಂಡನನ್ನು ಬಿಟ್ಟು ಹೋಗಿದ್ದಾರೆ. 5 ವರ್ಷದ ಹಿಂದೆಯೇ ಇವರಿಬ್ಬರ ಮದುವೆ ನಡೆದಿತ್ತು. ಮನೆಯಲ್ಲಿ ಟಾಯ್ಲೆಟ್ ಇಲ್ಲದೇ ಇರುವುದು ಗೊತ್ತಾಗಿ ಹೇಗೋ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಿದರು. ಆದರೆ ಟಾಯ್ಲೆಟ್ ಕಟ್ಟಿಸುವಂತೆ ಪದೇ ಪದೇ ಗಂಡನಲ್ಲಿ ಕೇಳಿಕೊಂಡಿದ್ದರು.

ಹೆಂಡತಿಯ ಆಸೆ ನೆರವೇರಿಸಲು ಗಂಡ ಕೂಡ ನಗರಸಭೆಗೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ಇದಕ್ಕೆ ಸ್ಪಂದಿಸಿಲ್ಲ. ಈ ಬಾರಿಯ ಮಳೆಗೆ ಇದ್ದೊಂದ ಮನೆಯೂ ಕೂಡ ಕುಸಿದು ಹೋಗಿದೆ. ಮನೆ ಕಟ್ಟದಿದ್ದರೂ ಬೇಡ ಟಾಯ್ಲೆಟ್ ಕಟ್ಟಿಸಿ ಎಂದು ಹೇಳಿ ಗಂಡನನ್ನು ಬಿಟ್ಟು ಮಗುವಿನ ಜತೆ ಗೀತಾ ಹೊರಟು ಹೋಗಿದ್ದಾರೆ.

ಈಗಲಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇವರ ಮನವಿಗೆ ಸ್ಪಂದಿಸಿ ಒಂದು ಸಂಸಾರವನ್ನು ಉಳಿಸುತ್ತಾರಾ ಎಂದು ನೋಡಬೇಕಾಗಿದೆ. (ಎನ್.ಬಿ)

Leave a Reply

comments

Related Articles

error: