ಮೈಸೂರು

ಚಾಮುಂಡಿ ಬೆಟ್ಟದಲ್ಲಿ ಯುವತಿಯ ಸರ, ಮೊಬೈಲ್ ಅಪಹರಣ

ಮೈಸೂರು,ಅ.27:- ಚಾಮುಂಡಿ ಬೆಟ್ಟದ ನಂದಿ ವಿಗ್ರಹದತ್ತ ಯುವಕನೋರ್ವ ಯುವತಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಮೂವರು ಅಪರಿಚಿತರು ಅವರನ್ನು ಬೆದರಿಸಿ ಚಿನ್ನದ ಸರ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.

ಅ.25ರಂದು ಶ್ರೀಕಾಂತ ಎಂಬವರು ತಮ್ಮ ದ್ವಿಚಕ್ರವಾಹನವನ್ನು ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಬಳಿ ನಿಲ್ಲಿಸಿ ನಂದಿ ವಿಗ್ರಹದ ಕಡೆಗೆ ರಸ್ತೆಯಲ್ಲಿ ಯುವತಿಯೋರ್ವಳ ಜೊತೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಮೂವರು ಅಪರಿಚಿತರು ಮೊದಲು ಜಗಳ ಆರಂಭಿಸಿದ್ದಾರೆ. ನಂತರ ಚಾಕು ತೋರಿಸಿ ಬೆದರಿಸಿದ್ದು, ಶ್ರೀಕಾಂತ್ ಬಳಿ ಹಣವಿರದ ಕಾರಣ ಅವರ ಜೊತೆಗಿದ್ದ ಯುವತಿಯ ಕತ್ತಿನಲ್ಲಿದ್ದ 14ಗ್ರಾಂ ತೂಕದ ಚಿನ್ನದ ಸರ ಮತ್ತು ಮೊಬೈಲ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕೆ.ಆರ್.ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: