ಮೈಸೂರು

ಮಗುವಿನ ಕತ್ತಿನಲ್ಲಿದ್ದ ಸರ ಪಡೆದು ಪರಾರಿ

ಮೈಸೂರು,ಅ.27:- ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ ಕೊರಳಿನಲ್ಲಿದ್ದ ಮೂವತ್ತು ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳರು ಅಪಹರಿಸಿದ ಘಟನೆ ರಾಮಕೃಷ್ಣ ನಗರದಲ್ಲಿ ನಡೆದಿದೆ.

ಈ ಕುರಿತು ರಾಧ  ಎಂಬವರು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅ.24ರಂದು ಬೆಳಿಗ್ಗೆ 11.40 ಕ್ಕೆ ರಾಮಕೃಷ್ಣನಗರ ಐ ಬ್ಲಾಕ್ , 3ನೇ ಮೇನ್, 2ನೇ ಕ್ರಾಸ್, ಮನೆಯ ನಂ-755 ರಲ್ಲಿ ಸಂಬಂಧಿಕರಾದ ಶ್ರೀಕಂಠಸ್ವಾಮಿ ಅವರ ಮನೆಗೆ ಧಾರ್ಮಿಕ  ಕಾರ್ಯದ ಸಲುವಾಗಿ ಬಂದಿದ್ದು, ತಮ್ಮ  7 ವರ್ಷದ ಮಗನಾದ ಪ್ರಣವ್ ನ ಕತ್ತಿಗೆ ಸುಮಾರು 30 ಗ್ರಾಂ ತೂಕದ ಚಿನ್ನದ ಸರವನ್ನು ಹಾಕಿದ್ದೆ. ಈ ಸಮಯದಲ್ಲಿ ತಮ್ಮ  ಮಗ ಬೇರೆ ಮಕ್ಕಳ ಜೊತೆ ಮಧ್ಯಾಹ್ನ 12.30 ರ ವೇಳೆ ಆಟವಾಡುತ್ತಿರುವಾಗ ಯಾರೋ ಒಬ್ಬ ಅಪರಿಚಿತ ಹುಡುಗ ನಿನ್ನ ಚಿನ್ನದ ಸರದ ಕೊಂಡಿ ಲೂಸ್ ಆಗಿದೆ, ಟೈಟ್ ಮಾಡಿಕೊಡುತ್ತೇನೆಂದು ಹೇಳಿ ಚಿನ್ನದ ಸರವನ್ನು ಬಿಚ್ಚಿಕೊಂಡಿರುವುದಾಗಿ  ಪ್ರಣವ್ ತಿಳಿಸಿದ್ದಾನೆ. ಆ  ಹುಡುಗನನ್ನು ಎಲ್ಲಾ ಕಡೆ ಹುಡುಕಿದರೂ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: